ಗ್ರೀನ್ ಝೋನ್ ಕೊಪ್ಪಳಕ್ಕೂ ಡೆಡ್ಲಿ ಕೊರೊನಾ ಕಾಟ ಶುರು

ಮಂಗಳವಾರ, 9 ಜೂನ್ 2020 (15:43 IST)
ಗ್ರೀನ್ ಝೋನ್ ನಲ್ಲಿದ್ದು ದೇಶದ ಗಮನ ಸೆಳೆದಿದ್ದ ಕೊಪ್ಪಳಕ್ಕೂ ಇದೀಗ ಡೆಡ್ಲಿ ಕೊರೊನಾ ವೈರಸ್ ಕಾಟ ಕೊಡಲು ಶುರುಮಾಡಿದೆ.

ಒಂದೇ ದಿನ ಕೊಪ್ಪಳದಲ್ಲಿ 6 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕರೋನಾ ಸಮುದಾಯಕ್ಕೆ ಹರಡಿದೆ ಎನ್ನುವ ಆತಂಕ ಜಿಲ್ಲೆಯಲ್ಲಿ  ಶುರುವಾಗಿದೆ.

ಕನಕಗಿರಿಯ 50 ವರ್ಷದ ಪುರುಷ, ಗಂಗಾವತಿಯ ಡಾಣಾಪುರದ 52 ವರ್ಷದ ಪುರುಷ, ಕಾರಟಗಿ ತಿಮ್ಮಾಪುರದ 23 ವರ್ಷದ ಮಹಿಳೆ, ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ 60 ವರ್ಷದ ಪುರುಷ, ಕಾರಟಗಿಯ 45 ವರ್ಷದ ಮಹಿಳೆ ಹಾಗೂ ಗಂಗಾವತಿಯ 18 ವರ್ಷದ ಯುವಕನಿಗೆ ಸೋಂಕು ದೃಢವಾಗಿದೆ. ಎರಡು ಪ್ರದೇಶಗಳನ್ನು ಈಗಾಗಲೇ ಸೀಲ್ ಡೌನ್ ಮಾಡಿದ್ದಾರೆ.

ಗಂಗಾವತಿಯ ಲಿಂಗರಾಜ ಕ್ಯಾಂಪ್ ಮತ್ತು ಢಣಾಪೂರ ಗ್ರಾಮ ಸಿಲ್ ಡೌನ್ ಮಾಡಲಾಗಿದೆ.

ಢಣಾಪೂರ ಗ್ರಾಮದಲ್ಲಿ ಮನೆ ಬಿಟ್ಟು ಹೊರಗೆ ಹೋಗಿರದ ವೃದ್ಧನಿಗೆ ಕೋವಿಡ್ 19 ದೃಢ ವಾಗಿದೆ. 61 ವರ್ಷದ ವೃದ್ಧನಿಗೆ ಕೋವಿಡ್ ‌19 ದೃಢವಾಗಿದೆ. ಮಗ ಬಟ್ಟೆ ವ್ಯಾಪಾರಿ ಎನ್ನಲಾಗಿದೆ. ಈಗಾಗಲೇ ಕೊರೋನಾ ಪಾಸಿಟಿವ್ ಬಂದಿರುವವರನ್ನು ಕೊಪ್ಪಳ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ