ಡಿಎಂಕೆ ಸಂಸದ ಶಿವು, ಎಐಎಡಿಎಂಕೆ ಸಂಸದೆ ಪುಷ್ಪಾ ಶಶಿಕಲಾ ಮಧ್ಯೆ ಚೆಲ್ಲಾಟ?

ಸೋಮವಾರ, 19 ಸೆಪ್ಟಂಬರ್ 2016 (18:13 IST)
ತಮಿಳುನಾಡು ರಾಜಕೀಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ಮುಜಗರ ಉಂಟಾಗುವಂತಹ ಸ್ಫೋಟಕ ಸುದ್ದಿಯೊಂದು ಬಹಿರಂಗವಲಾಗಿದೆ.
ಎಐಎಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ರಾಜ್ಯಸಭೆ ಸದಸ್ಯೆ ಪುಷ್ಪ ಶಶಿಕಲಾ ಮತ್ತು ತಿರುಚ್ಚಿ ಲೋಕಸಭೆ ಕ್ಷೇತ್ರದ ಡಿಎಂಕೆ ಸಂಸದ ಶಿವು ಅವರ ನಡುವಿನ ಚೆಲ್ಲಾಟದ ಫೋಟೋಗಳು ಬಹಿರಂಗಗೊಂಡಿದ್ದು ಇದೀಗ ವೈರಲ್ ಆಗಿವೆ.
 
ಡಿಎಂಕೆ ಪಕ್ಷದ ಸಂಸದ ಶಿವು ಮತ್ತು ಎಐಎಡಿಎಂಕೆ ಉಚ್ಚಾಟಿತ ರಾಜ್ಯಸಭೆ ಸದಸ್ಯೆ ಪುಷ್ಪಾ ಶಶಿಕಲಾ ಮಧ್ಯದ ರಹಸ್ಯ ಸಂಬಂಧಗಳು ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ರಾರಾಜಿಸುತ್ತಿವೆ. ಹಿಂದೆ ಹಲವಾರು ಬಾರಿ ಇಂತಹ ಫೋಟೋಗಳು ಬಂದಿದ್ದಾಗ ಅವೆಲ್ಲಾ ನಕಲಿ ಫೋಟೋಗಳು ಎಂದು ಫುಷ್ಪಾ ಶಶಿಕಲಾ ತಳ್ಳಿಹಾಕಿದ್ದರು.
ಪುಷ್ಪಾ ಶಶಿಕಲಾಗೆ ಬಿಲಾಲ್ ಎಂಬಾತನೊಂದಿಗೆ ಅನೈತಿಕ ಸಂಬಂಧವಿದೆ ಎಂದು ಹೇಳಲಾಗುತ್ತಿತ್ತು. 
 
ಕಳೆದ ತಿಂಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಡಿಎಂಕೆ ಸಂಸದ ತಿರುಚ್ಚಿ ಶಿವುಗೆ ಕಪಾಳಮೋಕ್ಷ ಮಾಡಿದ್ದ ಪುಷ್ಪ ಶಶಿಕಲಾ ಭಾರಿ ವಿವಾದಕ್ಕೊಳಗಾಗಿದ್ದರು. ಹೊರಗಡೆ ಕಪಾಳಮೋಕ್ಷ ಒಳಗಡೆ ಚೆಲ್ಲಾಟ ನಡೆದಿರುವುದು ಇದೀಗ ಬಹಿರಂಗವಾಗಿದೆ.
 
ಕಟು ಟೀಕೆಗಳಿಗೆ ಕುಖ್ಯಾತಿ ಪಡೆದಿರುವ ಪುಷ್ಪ ಶಶಿಕಲಾ, ಎಐಎಡಿಎಂಕೆ ಮುಖ್ಯಸ್ಥೆ ಮುಖ್ಯಮಂತ್ರಿ ಜಯಲಲಿತಾ ವಿರುದ್ಧವೇ ವಾಗ್ದಾಳಿ ನಡೆಸಿದ್ದರು. ಇದೀಗ ಫೋಟೋಗಳು ವೈರಲ್‌ ಆಗಿದ್ದು, ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಸ್ಫೋಟಕ ಸುದ್ದಿಯಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ