ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಾತಾವರಣವಿದ್ದಾಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವೇ ಕದನ ವಿರಾಮವಾಗಿದೆ ಎಂದು ಎಕ್ಸ್ ನಲ್ಲಿ ಘೋಷಣೆ ಮಾಡಿದ್ದರು. ಇದೀಗ ಇಸ್ರೇಲ್-ಇರಾನ್ ನಡುವಿನ ಯುದ್ಧದಲ್ಲೂ ತಾವೇ ಕದನ ವಿರಾಮವಾಗಿದೆ ಎಂದು ಘೋಷಿಸಿದ್ದಾರೆ. ಆದರೆ ಇಲ್ಲಿ ಆಗಿದ್ದೇನು ಗೊತ್ತಾ?
ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಿಸಿದ್ದು ನಾನೇ ಎಂದು ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ ಘೋಷಿಸಿದ್ದರು. ಅದಾದ ಬಳಿಕ ಎಲ್ಲೇ ಹೋದರೂ ಭಾರತ ಮತ್ತು ಪಾಕಿಸ್ತಾನ ನಡುವೆ ನಾನೇ ಕದನ ವಿರಾಮ ಮಾಡಿಸಿದ್ದು ಎಂದು ಪೋಸ್ ಕೊಡುತ್ತಲೇ ಇದ್ದರು. ಭಾರತ ಸರ್ಕಾರವೂ ನೇರವಾಗಿ ಪಾಕಿಸ್ತಾನದಿಂದ ಪ್ರಸ್ತಾಪ ಬಂದಿದ್ದಕ್ಕೇ ಒಪ್ಪಿಕೊಂಡಿದ್ದು ಎಂದು ಸ್ಪಷ್ಟನೆ ಕೊಟ್ಟಿತ್ತು. ಆದರೂ ಟ್ರಂಪ್ ಹೇಳುವುದನ್ನು ಮಾತ್ರ ಬಿಡಲಿಲ್ಲ. ಅದೇನೇ ಇರಲಿ, ಟ್ರಂಪ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಎರಡೂ ದೇಶಗಳೂ ಸೈಲೆಂಟ್ ಆಗಿದ್ದವು.
ಈಗ ಇಸ್ರೇಲ್ ಮತ್ತು ಇರಾನ್ ನಡುವೆಯೂ ಡೊನಾಲ್ಡ್ ಟ್ರಂಪ್ ತಾವೇ ಕದನವಿರಾಮವಾಗಿದೆ ಎಂದು ಘೋಷಿಸಿದ್ದಾರೆ. ಆದರೆ ಇಷ್ಟಕ್ಕೇ ಎರಡು ದೇಶಗಳೂ ಸೈಲೆಂಟ್ ಆಗಿಲ್ಲ. ಇಸ್ರೇಲ್ ನಿಂದ ದಾಳಿ ನಿಲ್ಲುವವರೆಗೂ ನಾವು ಕದನ ವಿರಾಮ ಒಪ್ಪಲ್ಲ ಎಂದು ಇರಾನ್ ಹೇಳಿದೆ. ಅತ್ತ ಇಸ್ರೇಲ್ ಕೂಡಾ ಟ್ರಂಪ್ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಮಿಸೈಲ್ ದಾಳಿಗೆ ಸೈರನ್ ಮೊಳಗಿಸಿದೆ. ಮೊದಲು ದಾಳಿ ನಡೆಸಿದ್ದು ಇಸ್ರೇಲ್ ಹೀಗಾಗಿ ಇಸ್ರೇಲ್ ದಾಳಿ ನಿಲ್ಲಿಸುವವರೆಗೂ ನಾವು ನಿಲ್ಲಿಸಲ್ಲ. ಕೊನೆಯ ಹನಿ ರಕ್ತ ಇರುವವರೆಗೂ ದಾಳಿ ನಡೆಸುತ್ತೇವೆ ಎಂದು ಇರಾನ್ ಹೇಳಿಕೊಂಡಿದೆ. ಹೀಗಾಗಿ ಇಲ್ಲಿ ಟ್ರಂಪ್ ಘೋಷಣೆ ಅಷ್ಟರಮಟ್ಟಿಗೆ ಸಕ್ಸಸ್ ಆಗಿಲ್ಲ.