ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಶಕೀಲ್ ಸುದ್ದಿಚಾನೆಲ್‍ವೊಂದನ್ನು ಸಂಪರ್ಕಿಸಿ, ರಾಜನ್ 1993ರ ಮುಂಬೈ ಸರಣಿ ಸ್ಫೋಟದ ಆರೋಪಿಗಳ ಪೈಕಿ 6 ಜನರನ್ನು 1998-2001ರ ನಡುವೆ ಗುಂಡಿಕ್ಕಿ ಕೊಂದಿದ್ದಾನೆ. ರಾಜನ್ ಕೃತ್ಯವನ್ನು ಇದುವರೆಗೆ ತನಗೆ ಮರೆಯಲಾಗಿಲ್ಲ. ಇದಕ್ಕಾಗಿ ಅವನು ಜೀವವನ್ನು ಶೀಘ್ರದಲ್ಲೇ ತೆರಬೇಕಾಗಿದೆ ಎಂದು ಹೇಳಿದ. ಛೋಟಾ ರಾಜನ್ ಶತ್ರುವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.
ಹತರಾದವರಲ್ಲಿ ಯಾಕೂಬ್ ಯೆದಾ ಸೋದರ ಮಜೀದ್‌ಖಾನ್ ಡಾನ್‌ಗೆ ನಿಕಟವರ್ತಿಯಾಗಿದ್ದ. ರಾಜನ್ ತನ್ನ ಶೂಟರ್‌ಗಳನ್ನು ಬಳಸಿಕೊಂಡು ದೋಂಗ್ರಿ ಮತ್ತಿತರ ಪ್ರದೇಶಗಳಲ್ಲಿ ಅವರನ್ನು ನಿವಾರಿಸಿದ. ಈ ಹತ್ಯೆಗಳಿಂದ ಡಿ ಕಂಪೆನಿ ಕೋರ್ಟ್‌ನಲ್ಲಿ ರಾಜನ್‌ಗೆ ಮರಣದಂಡನೆ ವಿಧಿಸಲಾಗಿದ್ದು, ಶೀಘ್ರದಲ್ಲೇ ನೇಣುಗಂಭಕ್ಕೆ ಏರುತ್ತಾನೆ ಎಂದು ಶಕೀಲ್ ಪ್ರತಿಕ್ರಿಯಿಸಿದ್ದಾನೆ.