ಕೋವಿಡ್ ಲಸಿಕೆ ನೀಡುವ ನೆಪದಲ್ಲಿ ಮನೆಗೆ ಬಂದ ನರ್ಸ್ ಮಾಡಿದ್ದೇನು ಗೊತ್ತಾ?

ಮಂಗಳವಾರ, 16 ಫೆಬ್ರವರಿ 2021 (08:06 IST)
ಹೈದರಾಬಾದ್ : ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಕೊರೊನಾ ವೈರಸ್ ಚುಚ್ಚುಮದ್ದು ಎಂದು ಹೇಳಿ ನಕಲಿ ಲಸಿಕೆಯನ್ನು ವೃದ್ಧ ದಂಪತಿಗೆ ಚುಚ್ಚಿ ಅವರ  ಆಭರಣವನ್ನು ದೋಚಿದ ಘಟನೆ ಮೀರ್ ಪೇಟೆಯ ಲಲಿತಾ ನಗರದಲ್ಲಿ ನಡೆದಿದೆ.

ವೃದ್ಧ ದಂಪತಿಗಳ ಮನೆಗೆ ಬಂದ ಆರೋಪಿ ಮಹಿಳೆ ಕೊರೊನಾ ಚುಚ್ಚುಮದ್ದು ಎಂದು ಹೇಳಿ ದಂಪತಿಗೆ ಮತ್ತು ಬರುವ ಲಸಿಕೆ ನೀಡಿ ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದಾಳೆ. ಎಚ್ಚರಗೊಂಡ ದಂಪತಿಗೆ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ