ಹೆಣ್ಣು ಮಕ್ಕಳು ಬೇಕೆಂಬ ಹಂಬಲದಿಂದ ವ್ಯಕ್ತಿಯೊಬ್ಬ ಮಾಡಿದ್ದೇನು ಗೊತ್ತಾ?

ಬುಧವಾರ, 30 ಜನವರಿ 2019 (10:47 IST)
ನವದೆಹಲಿ : ಹೆಣ್ಣು ಮಕ್ಕಳು ಬೇಕೆಂಬ ಹಂಬಲದಿಂದ ವ್ಯಕ್ತಿಯೊಬ್ಬ ಇಬ್ಬರು ಅಪ್ರಾಪ್ತೆಯರನ್ನು ಕಿಡ್ನಾಪ್ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

ಕೃಷ್ಣ ದತ್ತ ತಿವಾರಿ(40) ಅಪ್ರಾಪ್ತೆಯರನ್ನು ಕಿಡ್ನಾಪ್ ಮಾಡಿದ ಆರೋಪಿ. ಈತನಿಗೆ 12 ವರ್ಷದ ಹಾಗೂ 14 ವರ್ಷದ ಗಂಡು ಮಕ್ಕಳಿದ್ದಾರೆ. ಆದರೆ ಈತ  ಹೆಣ್ಣು ಮಕ್ಕಳು ಬೇಕೆಂಬ ಹಂಬಲದಿಂದ ಇಬ್ಬರು ಅಪ್ರಾಪ್ತೆಯರನ್ನು ಕಿಡ್ನಾಪ್ ಮಾಡಿದ್ದಾನೆ. ಆದರೆ ಅವರಿಗೆ ಯಾವುದೇ ಕೆಡುಕನ್ನು ಮಾಡದೆ  ತನ್ನ ಮಕ್ಕಳಂತೆ ನೋಡಿಕೊಂಡು ನಂತರ ಅವರನ್ನು ಕ್ಷೇಮವಾಗಿ ಮನೆಗೆ ಹಿಂತಿರುಗಿಸಿದ್ದಾನೆ.

 

ಕೃತಿನಗರದ ಜವಾಹರ್ ಕ್ಯಾಂಪ್ ನಿವಾಸಿ ತನ್ನ 8 ವರ್ಷದ ಮಗಳು ಕಾಣೆ ಆಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಕೃಷ್ಣ ಎರಡನೇ ಬಾರಿ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಿ ಮನೆಗೆ ವಾಪಸ್ ಬಿಡುವಾಗ ಈ ದೃಶ್ಯ  ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ಪರಿಶೀಲಿಸಿದ  ಪೊಲೀಸರು ಆತನನ್ನು ಬಂಧಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ