ಪತ್ನಿಗೆ ಕಾಡಿನಲ್ಲಿ ದೈಹಿಕ ಸಂಬಂಧದ ಆಸೆ ತೋರಿಸಿ ಪತಿ ಮಾಡಿದ್ದೇನು ಗೊತ್ತೇ?

ಶುಕ್ರವಾರ, 11 ಜನವರಿ 2019 (07:01 IST)
ಡೆಹ್ರಾಡೂನ್ : ಯಾವಾಗಲೂ ಜಗಳವಾಡುತ್ತಿದ್ದ ಪತ್ನಿಯ ಮೇಲೆ ಕೋಪಗೊಂಡ ಪತಿರಾಯ ಆಕೆಯ  ಖಾಸಗಿ ಅಂಗಕ್ಕೆ ಬೆಂಕಿಯಿಟ್ಟ ಘಟನೆ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಿಂದ 90 ಕಿಲೋಮೀಟರ್ ದೂರದ ಹಳ್ಳಿಯೊಂದರಲ್ಲಿ ನಡೆದಿದೆ.


ಪತಿ-ಪತ್ನಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಘಟನೆ ನಡೆದ ಹಿಂದಿನ ದಿನ ಕೂಡ ಇಬ್ಬರು ಜಗಳ ಮಾಡಿಕೊಂಡಿದ್ದರು. ಇದರಿಂದ ಕೋಪಗೊಂಡಿದ್ದ ಪತಿ, ಪತ್ನಿಯ ಜೊತೆ ಸಂಬಂಧ ಬೆಳೆಸುವ ಆಸೆ ವ್ಯಕ್ತಪಡಿಸಿ ಆಕೆಯನ್ನು ಪುಸಲಾಯಿಸಿ ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಉರಿಯುತ್ತಿದ್ದ ಬೆಂಕಿ ಕೋಲನ್ನು ತೆಗೆದುಕೊಂಡು  ಪತ್ನಿಯ ಖಾಸಗಿ ಅಂಗಕ್ಕೆ ಇಟ್ಟಿದ್ದಾನೆ.


ಪತ್ನಿಯ ಖಾಸಗಿ ಅಂಗ ಸುಟ್ಟು ಹೋಗಿದ್ದು, ನೋವಿನಿಂದ ಕಿರುಚುತ್ತಾ ಅಲ್ಲಿಂದ ತಪ್ಪಿಸಿಕೊಂಡು ಆಕೆ ತಾಯಿ ಮನೆಗೆ ಬಂದಿದ್ದಾಳೆ. ನೋವಿನಿಂದ ನರಳುತ್ತಿದ್ದ ಆಕೆಯನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ