ವಿನೇಶ್ ಫೋಗಟ್ ಅನರ್ಹತೆ ಬಗ್ಗೆ ಪಿಟಿ ಉಷಾಗೆ ಕರೆ ಮಾಡಿದ ಮೋದಿ ಏನಂದ್ರು ಗೊತ್ತಾ

Sampriya

ಬುಧವಾರ, 7 ಆಗಸ್ಟ್ 2024 (15:58 IST)
Photo Courtesy X
ನವದೆಹಲಿ:  ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಕುಸ್ತಿ ಸ್ಪರ್ಧೆಗೆ ವಿನೇಶ್ ಫೋಗಟ್ ಅನರ್ಹಗೊಂಡ ಬೆನ್ನಲ್ಲೇ  ಪ್ರಧಾನಿ ನರೇಂದ್ರ ಮೋದಿ ಅವರು ಐಒಎ ಅಧ್ಯಕ್ಷೆ ಪಿಟಿ ಉಷಾ ಅವರಿಗೆ ಕರೆ ಮಾಡಿ, ಸಮಸ್ಯೆಯನ್ನು ಬಗೆ ಹರಿಸಲು ಸೂಕ್ತ ಮಾರ್ಗವನ್ನು ಹುಡುಕಿ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ, ವಿನೇಶಾ ಅವರು ಸ್ಪರ್ಧೆಯಿಂದ ಅನರ್ಹರಾಗುತ್ತಿದ್ದ ಹಾಗೇ ಪ್ರಧಾನಿ ಮೋದಿ ಅವರು ಉಷಾ ಅವರಿಗೆ ಕರೆ ಮಾಡಿ, ಎಲ್ಲ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಅದಲ್ಲದೆ  ವಿನೇಶಾ ಫೋಗಟ್ ಅವರ ಅನರ್ಹತೆಯ ಬಗ್ಗೆ ಉಷಾ ಅವರು ಪ್ರಬಲವಾಗಿ ಧ್ವನಿ ಎತ್ತಿ, ಪ್ರತಿಭಟಿಸಿ ಎಂದು ಸಲಹೆ ನೀಡಿದ್ದಾರೆ.

ಆದರೆ ನಿಮಯವಾಳಿಗಳ ಪ್ರಕಾರ ವಿನೇಶಾ ತೂಕದಲ್ಲಿ ಏರಿಕೆಯಾಗಿರುವುದರಿಂದ ಫೈನಲ್ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಬುಧವಾರ, ಮಹಿಳೆಯರ 50 ಕೆಜಿ ಕುಸ್ತಿ ಸ್ಪರ್ಧೆಯಿಂದ ಫೋಗಟ್‌ರನ್ನು ಅನರ್ಹಗೊಳಿಸಿದ ಬಗ್ಗೆ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದರು. ಎಕ್ಸ್ ನಲ್ಲಿ ಹೃತ್ಪೂರ್ವಕ ಪೋಸ್ಟ್‌ನಲ್ಲಿ ಮೋದಿ ತಮ್ಮ ಬೆಂಬಲವನ್ನು ವಿನೇಶಾಗೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ