ಬಾತ್ ರೂಂ ನಲ್ಲಿ 22 ವರ್ಷದ ಯುವತಿ ಸ್ನಾನಮಾಡುತ್ತಿದ್ದಾಗ 14 ವರ್ಷದ ಬಾಲಕ ಮಾಡಿದ್ದೇನು ಗೊತ್ತಾ?

ಗುರುವಾರ, 20 ಡಿಸೆಂಬರ್ 2018 (12:54 IST)
ಹೈದರಾಬಾದ್ : ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಯಾವ ರೀತಿಯ ಅನಾಹುತ ನಡೆಯುತ್ತದೆ ಎಂಬುದಕ್ಕೆ ಹೈದರಾಬಾದ್ ಸಮೀಪದ ಮಾಧಾಪುರದಲ್ಲಿ ನಡೆದ ಘಟನೆ ಒಂದು ಉದಾಹರಣೆ.


ಮಾಧಾಪುರ ಹಾಸ್ಟೆಲ್ ನಲ್ಲಿ22 ವರ್ಷದ ಯುವತಿ ಸ್ನಾನ ಮಾಡಲೆಂದು ಬಾತ್ ರೂಂಗೆ ಹೋಗಿದ್ದಾಗ 14 ವರ್ಷದ ಬಾಲಕನೊಬ್ಬ ಸ್ನಾನ ಮಾಡುತ್ತಿದ್ದ ಯುವತಿಯ ಚಿತ್ರವನ್ನು ತನ್ನ ಟ್ಯಾಬ್ಲೆಟ್ ನಲ್ಲಿ ಶೂಟ್ ಮಾಡಿದ್ದಾನೆ. ಇದನ್ನು ನೋಡಿದ ಹಾಸ್ಟೆಲ್ ಸಿಬ್ಬಂದಿ ಹಾಗೂ ಜನರು ಬಾಲಕನನ್ನು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.


ಈ ಘಟನೆಗೆ ಸಂಬಂಧಪಟ್ಟಂತೆ  ವಿಚಾರಣೆ ಮಾಡಿದ ಪೊಲೀಸರು ಬಾಲಕನ ಟ್ಯಾಬ್ ನ್ನು ಪೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಿದ್ದು, ಎಲ್ಲಾದರೂ ಈ ವಿಡಿಯೋ, ಇಮೇಜ್ ಶೇರ್ ಆಗಿದೆಯೇ ಎಂದು ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ