ಜೊಮ್ಯಾಟೊ ಕಂಪೆನಿ ವಿರುದ್ಧ ಡೆಲಿವರಿ ಬಾಯ್ಸ್ ಸಿಡಿದೆದಿದ್ದೇಕೆ ಗೊತ್ತಾ?

ಸೋಮವಾರ, 12 ಆಗಸ್ಟ್ 2019 (09:28 IST)
ಪಶ್ಚಿಮ ಬಂಗಾಳ : ಇತ್ತೀಚೆಗಷ್ಟೇ ಧರ್ಮದ ವಿಚಾರದಲ್ಲಿ ಸಂಕಷ್ಟಕ್ಕೀಡಾದ ಆನ್ ಲೈನ್ ಫುಡ್ ಡೆಲಿವರಿ ಕಂಪೆನಿ ಜೊಮ್ಯಾಟೊ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದೆ.
ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಜೊಮ್ಯಾಟೊ ಕಂಪೆನಿ ವಿರುದ್ಧ ಡೆಲಿವರಿ ಬಾಯ್ ಗಳೇ ಕಳೆದ 7 ದಿನಗಳಿಂದ ಬೀದಿಗಿಳಿದು ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ತೊಡಗಿದ್ದು,  ತಮ್ಮ ಎಲ್ಲಾ ಬೇಡಿಕೆಗಳು ಈಡೇರಿವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಹೇಳಿದ್ದಾರೆ.


ಬೀಫ್, ಪೋರ್ಕ್ ಗಳನ್ನು ಡೆಲಿವರಿ ನೀಡುವಂತೆ ಒತ್ತಾಯ ಮಾಡಲಾಗುತ್ತಿದೆ. ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಡೆಲಿವರಿ ಬಾಯ್ಸ್ ಆರೋಪ ಮಾಡಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರ, ಸಂಸ್ಥೆಯ ಯಾವುದೇ ನೌಕರನಿಗೆ ಆತನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಡೆಲಿವರಿ ನೀಡುವುದಕ್ಕೆ ಒತ್ತಾಯ ಮಾಡಬಾರದು, ಜೊಮ್ಯಾಟೋ ಬಗ್ಗೆ ದೂರು ಬಂದಿದ್ದು ಈ ಬಗ್ಗೆ ಗಮನಿಸಲಾಗುವುದು ಎಂದು ತಿಳಿಸಿದೆ. ಆದರೆ ಪೋರ್ಕ್, ಬೀಫ್ ಡೆಲಿವರಿ ನೀಡುವುದನ್ನು ನಿರಾಕರಿಸುವಂತಿಲ್ಲ, ಯಾವುದೇ ಪರಿಸ್ಥಿತಿಯಲ್ಲಿಯೂ ಆರ್ಡರ್ ನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸಂಸ್ಥೆ ಎಚ್ಚರಿಸಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ