ಶಾಲಾ ದಿನಗಳಲ್ಲಿ ಇಷ್ಟಪಡುತ್ತಿದ್ದ ಹುಡುಗಿಗಾಗಿ ಇಂತಹ ಕೆಲಸ ಮಾಡಿ ಜೈಲು ಸೇರಿದ
ಸೋಮವಾರ, 4 ಜನವರಿ 2021 (09:06 IST)
ಸೂರತ್ : 18 ವರ್ಷದ ಬಿಎಸ್ ಸಿ ವಿದ್ಯಾರ್ಥಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.
ಆರೋಪಿ ವಿದ್ಯಾರ್ಥಿ ಶಾಲಾ ದಿನಗಳಲ್ಲಿ ಹುಡುಗಿಯನ್ನು ಇಷ್ಟಪಡುತ್ತಿದ್ದ. ಆಕೆ ತನ್ನ ತಂಗಿಗೆ ಹತ್ತಿರವಾಗಿದ್ದ ಹಿನ್ನಲೆಯಲ್ಲಿ ಮೂರು ನಕಲಿ ಇನ್ ಸ್ಟಾಗ್ರಾಂ ಖಾತೆಗಳನ್ನು ರಚಿಸಿ ಮಾರ್ಫಡ್ ಫೋಟೊಗಳನ್ನು ಆಕೆಗೆ ಕಳುಹಿಸಿ ತನ್ನೊಂದಿಗೆ ಚಾಟ್ ಮಾಡುವಂತೆ ಒತ್ತಾಯಿಸಿದ್ದಾನೆ.
ಈ ಬಗ್ಗೆ ಹುಡುಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.