ಪಕ್ಷಪಾತ ತೋರುವ ಪೊಲೀಸರನ್ನು ಥಳಿಸಿ: ಬಿಜೆಪಿ ರಾಜ್ಯಾಧ್ಯಕ್ಷ

ಬುಧವಾರ, 6 ಸೆಪ್ಟಂಬರ್ 2017 (15:40 IST)
ಒಂದು ವೇಳೆ, ಪೊಲೀಸರು ತೃಣಮೂಲ ಕಾಂಗ್ರೆಸ್ ಪಕ್ಷದ ಬೆಂಬಲಿಗರ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಹಿಂಜರಿದಲ್ಲಿ ಅಂತಹ ಪೊಲೀಸರನ್ನು ಥಳಿಸಿ ಎಂದು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಕರೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. 
ದಕ್ಷಿಣ ಕೋಲ್ಕತಾದಲ್ಲಿ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರನ್ನು ಥಳಿಸಿದ್ದಾರೆ. ಹಲ್ಲೆ ಮಾಡಿದ ಟಿಎಂಸಿ ನಾಯಕರನ್ನು ಬಂಧಿಸುವ ಬದಲಿಗೆ, ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎನ್ನುವ ವರದಿಗಳ ನಂತರ ಘೋಷ್ ಹೇಳಿಕೆ ಹೊರಬಿದ್ದಿದೆ. 
 
ತೃಣಮೂಲ ಕಾಂಗ್ರೆಸ್ ಪಕ್ಷದ ನಿರ್ದೇಶನದ ಮೇರೆಗೆ ನಮ್ಮನ್ನು ಗುರಿಯಾಗಿಸುತ್ತಿರುವ ಪೊಲೀಸರಿಗೆ ಥಳಿಸುವುದು ನಮ್ಮ ಪ್ರಜಾಪ್ರಭುತ್ವದ ಹಕ್ಕು ಎಂದು ಹೌರಾದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. 
 
ಪೊಲೀಸರ ಮೇಲೆ ದಾಳಿ ನಡೆಸಿದ ನಂತರವೂ ತೃಣಮೂಲ ಪಕ್ಷದ ನಾಯಕರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಾಗುತ್ತಿಲ್ಲ. ಒಂದು ವೇಳೆ ಅವರು ಸುಲಭವಾಗಿ ಹೊರಬರುವುದಾದಲ್ಲಿ ನಾವು ಅವರನ್ನೇ ಅನುಸರಿಸುತ್ತೇವೆ. ಅನ್ಯಾಯವನ್ನು ಸಹಿಸಬೇಡಿ. ಪಕ್ಷಪಾತ ತೋರಿಸುವ ಪೊಲೀಸರನ್ನು ಥಳಿಸಿ ಎಂದು ಗುಡುಗಿದ್ದಾರೆ. 
 
ರಾಜ್ಯ ಬಿಜೆಪಿ ಯಾವಾಗಲೂ ಆರೋಗ್ಯಕರ ಮತ್ತು ನ್ಯಾಯಯುತವಾದ ರಾಜಕೀಯ ಹೋರಾಟವನ್ನು ಬಯಸುತ್ತದೆ. ಪ್ರತಿದಿನ ಯಾವುದೇ ಆರೋಪಗಳಿಲ್ಲದಿದ್ದರೂ ಪೊಲೀಸರು ಅಥವಾ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಕಿಡಿಕಾರಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ