ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಡೊನಾಲ್ಡ್ ಟ್ರಂಪ್ ಗೆ ಭರ್ಜರಿ ಗೆಲುವು
ಯುನೈಟೆಡ್ ಸ್ಟೇಟ್ಸ್ : ಮಂಗಳವಾರ ನಡೆದ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಡೊನಾಲ್ಡ್ ಟ್ರಂಪ್ ಗೆ ಭರ್ಜರಿ ಗೆಲುವು ದೊರೆತಿದೆ. ಇದರಿಂದಾಗಿ ರಿಪಬ್ಲಿಕನ್ ಪಕ್ಷದ ಅಭರ್ಥಿಯಾಗಿ ಟ್ರಂಪ್ ಅವರ ಸ್ಪರ್ಧೆ ಮತ್ತಷ್ಟು ಬಲವಾಗಿದೆ. ತಮ್ಮ ಸಮೀಪದ ಸ್ಪರ್ಧಿಯಾದ ನಿಕ್ಕಿ ಹಾಲೇ ಅವರನ್ನು ಮಣಿಸಿದ ಡೊನಾಲ್ಡ್ ಟ್ರಂಪ್ ಸುಲಭವಾಗಿ ಬಹುಮತ ಸಾಧಿಸಿದರು.
ಟ್ರಂಪ್ ವಿರುದ್ದ ಎರಡು ಅಧ್ಯಕ್ಷೀಯ ಸ್ಥಾನ ದುರುಪಯೋಗಪಡಿಸಿಕೊಂಡ ದೋಷಾರೋಪಣೆ ಹಾಗೂ ನಾಲ್ಕು ಕ್ರಿಮಿನಲ್ ಮೊಕದ್ದಮೆಗಳು ಬಾಕಿಯಿದೆ. ಇದು ಡೆಮಾಕ್ರಿಟಿಕ್ ಪಕ್ಷಕ್ಕೆ ಸುಲಭವಾದ ಪ್ರಚಾರದ ಸರಕಾಗಿ ದೊರೆತಿದೆ. ಇದಲ್ಲದೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವಷ್ಟು ದೈಹಿಕ ಕ್ಷಮತೆ ಹೊಂದಿಲ್ಲ ಎಂದೂ ಪ್ರತಿಪಕ್ಷದವರು ಆರೋಪಿಸಿದ್ದಾರೆ.