ಅದಾನಿ ಕಂಪನಿ ವಿರುದ್ಧ ಮತ್ತೊಂದು ಆರೋಪ ಮಾಡಿದ ಅಮೆರಿಕದ ಸಂಸ್ಥೆ

ಭಾನುವಾರ, 3 ಸೆಪ್ಟಂಬರ್ 2023 (16:40 IST)
ಗೌತಮ್‌ ಅದಾನಿ ಕುಟುಂಬವು 2013-18ರ ಅವಧಿಯಲ್ಲಿ ತಮ್ಮದೇ ಕಂಪನಿಗಳ ಷೇರುಗಳ ಮೇಲೆ ಮಾರಿಷಸ್‌ ಮೂಲದ ಒಪೆಕ್ಯೂ ಇನ್ವೆಸ್ಟ್‌ಮೆಂಟ್ ಫಂಡ್‌ ಹೆಸರಿನ ಸಂಸ್ಥೆಯ ಮೂಲಕ ಭಾರೀ ಪ್ರಮಾಣದ ಹಣವನ್ನು ರಹಸ್ಯವಾಗಿ ಹೂಡಿಕೆ ಮಾಡಿತ್ತು ಎಂಬ ಗಂಭೀರ ಆರೋಪವೊಂದು ಕೇಳಿಬಬಂದಿದೆ. ವಿಶೇಷವೆಂದರೆ ಈ ಅವಧಿಯಲ್ಲಿ ಅದಾನಿ ಸಮೂಹದ ಷೇರುಗಳ ಮೌಲ್ಯ ಭಾರೀ ಏರಿಕೆ ಕಂಡಿತ್ತು.THE ORGNIZED CRIMW AND CORROPTION REPORTING PROJECT ಎಂಬ ಸಂಸ್ಥೆ ಅದಾನಿ ಸಮೂಹದ ಮೇಲೆ ಈ ಗಂಭೀರ ಆರೋಪ ಮಾಡಿದೆ.ಆದರೆ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಅದಾನಿ ಸಮೂಹ, ‘ಇದು ಹಳೆಯ ಆರೋಪವಾಗಿದ್ದ ಹಳೇ ಆಪಾದನೆಯನ್ನೇ ಮರುಬಳಕೆ ಮಾಡಿದಂತಿದೆ’ ಎಂದು ವ್ಯಂಗ್ಯವಾಡಿದೆ. ಜೊತೆಗೆ ದಶಕಗಳ ಹಿಂದೆ ತನಿಖೆ ನಡೆಸಿ ಕ್ಲೀನ್‌ಚಿಟ್‌ ನೀಡಲಾದ ಪ್ರಕರಣದ ಅಂಕಿ ಅಂಶಗಳನ್ನು ಇಟ್ಟುಕೊಂಡೇ ಮತ್ತೆ ಹೊಸ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ