ಅಫ್ಘಾನಿಸ್ತಾನಕ್ಕೆ ಭಾರತದಿಂದ ಔಷಧಿ ರವಾನೆ

ಭಾನುವಾರ, 30 ಜನವರಿ 2022 (08:54 IST)
ನವದೆಹಲಿ : ತಾಲಿಬಾನ್ ಆಡಳಿತದಿಂದಾಗಿ ತತ್ತರಿಸುವ ಅಫ್ಘಾನಿಸ್ತಾನಕ್ಕೆ ಭಾರತ ನೆರವು ನೀಡಲು ಮುಂದಾಗಿದೆ ಸತತ ನಾಲ್ಕನೇ ಬಾರಿಗೆ ಅಪ್ಘಾನಿಸ್ತಾನಕ್ಕೆ ಭಾರತ ವೈದ್ಯಕೀಯ ನೆರವು ನೀಡಿದೆ.

ಶನಿವಾರ ಭಾರತ ಅಫ್ಘಾನಿಸ್ತಾನಕ್ಕೆ ಮೂರು ಟನ್ಗಳಷ್ಟು ಅಗತ್ಯ ಜೀವರಕ್ಷಕ ಔಷಧಿಗಳನ್ನು ಕಳುಹಿಸಿದೆ. ಯುದ್ಧ ಪೀಡಿತ ದೇಶಕ್ಕೆ ಭಾರತ ನಾಲ್ಕನೇ ಬ್ಯಾಚ್ನಲ್ಲಿ 3 ಟನ್ಗಳಷ್ಟು ವೈದ್ಯಕೀಯ ನೆರವನ್ನು ನೀಡಿದೆ.

ಮುಂದಿನ ವಾರಗಳಲ್ಲಿ ಅಲ್ಲಿನ ಜನರಿಗೆ ಔಷಧ ಹಾಗೂ ಆಹಾರ ಧಾನ್ಯಗಳ ರೂಪದಲ್ಲಿ ಇನ್ನಷ್ಟು ಸಹಾಯ ಮಾಡಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ ತಿಳಿಸಿದೆ. 

ಅಫ್ಘಾನಿಸ್ತಾನ ಜನರೊಂದಿಗೆ ವಿಶೇಷ ಸಂಬಂಧವನ್ನು ಮುಂದುವರಿಸಲು ಹಾಗೂ ಮಾನವೀಯ ನೆರವನ್ನು ನೀಡಲು ಭಾರತ ಬದ್ಧವಾಗಿದೆ. ಮಾನವೀಯ ನೆರವಿನ ಭಾಗವಾಗಿ ಭಾರತ ಅಫ್ಘಾನಿಸ್ತಾನಕ್ಕೆ 3 ಟನ್ಗಳಷ್ಟು ಔಷಧಿಗಳನ್ನು ಒಳಗೊಂಡಿರುವ ನಾಲ್ಕನೇ ಬ್ಯಾಚ್ ವೈದ್ಯಕೀಯ ನೆರವನ್ನು ಪೂರೈಸಿದೆ. ಅದನ್ನು ಕಾಬೂಲ್ನ ಇಂದಿರಾ ಗಾಂಧಿ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ