ಮದ್ಯವನ್ನ ಕಾಲುವೆಗೆ ಸುರಿದ ತಾಲಿಬಾನ್! ಯಾಕೆ ಗೊತ್ತ?

ಸೋಮವಾರ, 3 ಜನವರಿ 2022 (06:01 IST)
ಕಾಬೂಲ್ : ಅಫ್ಘಾನಿಸ್ತಾನದ ಗುಪ್ತಚರ ಏಜೆಂಟ್ ತಂಡವು 3,000 ಲೀಟರ್ ಮದ್ಯವನ್ನು ಕಾಲುವೆಗೆ ಸುರಿದಿದೆ.
 
ಅಫ್ಘಾನಿಸ್ತಾನದ ಗುಪ್ತಚರ ಏಜೆಂಟ್ ತಂಡವು ಕಾಬೂಲ್ನ ಕಾಲುವೆಗೆ ಸುಮಾರು 3,000 ಲೀಟರ್ ಮದ್ಯವನ್ನು ಸುರಿದಿದೆ ಎಂದು ದೇಶದ ಬೇಹುಗಾರಿಕಾ ಸಂಸ್ಥೆ ಇಂದು ತಿಳಿಸಿದೆ. ಅದು ಅಲ್ಲದೇ ಈ ಕುರಿತು ತಾಲಿಬಾನ್ ಅಧಿಕಾರಿಗಳು ಮದ್ಯ ಮಾರಾಟವನ್ನು ಭೇದಿಸುತ್ತಿದೆ ಎಂದು ತಿಳಿಸಿದೆ. 

ಜನರಲ್ ಡೈರೆಕ್ಟರೇಟ್ ಆಫ್ ಇಂಟೆಲಿಜೆನ್ಸ್(ಜಿಡಿಐ) ಈ ಕುರಿತು ಮಾಹಿತಿ ನೀಡಿದ್ದು, ಕಾಬೂಲ್ ನಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ತಿಳಿದ ನಂತರ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಮದ್ಯವನ್ನು ವಶಪಡಿಸಿಕೊಂಡ ಏಜೆಂಟ್ ಗಳು ಅದನ್ನು ಕಾಲುವೆಗೆ ಸುರಿದಿದ್ದಾರೆ.

ಗುಪ್ತಚರ ಅಧಿಕಾರಿಯೊಬ್ಬರು ಇಂದು ಟ್ವಿಟರ್ನಲ್ಲಿ, ಮುಸ್ಲಿಮರು ಮದ್ಯ ತಯಾರಿಕೆ ಮತ್ತು ವಿತರಣೆಯಿಂದ ಗಂಭೀರವಾಗಿ ದೂರವಿರಬೇಕು ಎಂದು ಬರೆದು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ