ಮಕ್ಕಳ ಡೈಪರ್‌ನಲ್ಲಿ ಡ್ರಗ್ಸ್ ಸಾಗಾಟ!
ಮಾನಸಿ ಬಂಧನಕ್ಕೆ ಒಳಗಾದ ಗಗನಸಖಿ. ಈಕೆಯ ಪತಿ ಪುಣೆಯಲ್ಲಿರುವದಾಗಿ ಹೇಳಿಕೊಂಡಿದ್ದಾಳೆ. ಅವಳು ಕನಿಷ್ಟ 10 ವರ್ಷದಿಂದ ಈ ಡ್ರಗ್ಸ್ ಜಾಲದಲ್ಲಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ಯಾಗ್ ತಪಾಸಣೆ ನಡೆಸಿದಾಗ ಮಗುವಿನ ಡೈಪರ್ ನಡುವೆ ಸುಮಾರು 10 ಲಕ್ಷ ಮೌಲ್ಯದ 100 ಗ್ರಾಂ ಎಂಡಿ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಈ ಪ್ರಕರಣ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಇಂದೋರ್ ಕಮಿಷನರ್ ಹರಿನಾರಾಯಣಚಾರಿ ಮಿಶ್ರಾ, ಕಳೆದ ಕೆಲವು ದಿನಗಳ ಹಿಂದೆ ನಾರ್ಕೋ ಸಹಾಯವಾಣಿ ಸಂಖ್ಯೆಗೆ 20ಕ್ಕೂ ಹೆಚ್ಚು ದೂರುಗಳು ಬಂದಿದ್ದವು.
ಇದರಲ್ಲಿ ಹೆಚ್ಚಿನ ದೂರುಗಳು ಡ್ರಗ್ಸ್ಗೆ ಸಂಬಂಧಿಸಿತ್ತು. ನಮ್ಮ ಪ್ರಕಾರ ಹೊಸ ವರ್ಷದ ಮುನ್ನ ದಿನದ ಪಾರ್ಟಿಗಳಿಗಾಗಿ ಜನರಿಗೆ ಸರಬರಾಜು ಮಾಡಲು ಅವಳು ಇಂದೋರ್ಗೆ ಡ್ರಗ್ಸ್ ತಂದಿದ್ದಾಳೆ ಎಂದು ತಿಳಿಸಿದ್ದಾರೆ.