ಡಿಎಸ್ ಪಿ ಮಗ, ಎಎಸ್ಐ ಅಮ್ಮ ಎದುರು ಬದುರಾದಾಗ ಏನಾಯ್ತು ಗೊತ್ತಾ?!
ಶನಿವಾರ, 21 ಆಗಸ್ಟ್ 2021 (11:45 IST)
ನವದೆಹಲಿ: ಅಮ್ಮ ಎಎಸ್ ಐ, ಮಗ ಡಿಎಸ್ ಪಿ. ಇಬ್ಬರೂ ಎದುರು ಬದಿರಾದಾಗ ಏನಾಯ್ತು ಗೊತ್ತಾ? ಇಂತಹದ್ದೊಂದು ಅಪರೂಪದ ವಿದ್ಯಮಾನ ನಡೆದಿರುವುದು ಗುಜರಾತ್ ನಲ್ಲಿ.
ಮಗ ವಿಶಾಲ್ ರಾಬರಿ ಪೊಲೀಸ್ ಇಲಾಖೆಯಲ್ಲಿ ಡಿಎಸ್ ಪಿ ಹುದ್ದೆಯಲ್ಲಿದ್ದರೆ, ಅಮ್ಮ ಮಧುಬೆನ್ ರಾಬರಿ ಎಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರೂ ಮೊನ್ನೆ ಸ್ವಾತಂತ್ರ್ಯೋತ್ಸವ ದಿನಾಚರಣೆ ವೇಳೆ ಕರ್ತವ್ಯದಲ್ಲಿದ್ದಾಗಲೇ ಮುಖಾಮುಖಿಯಾದರು.
ಈ ವೇಳೆ ಅಮ್ಮ ಮತ್ತು ಮಗ ಇಬ್ಬರೂ ಪರಸ್ಪರ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು. ಈ ಇಬ್ಬರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.