'ಏಕ ಶ್ರೇಣಿ ಏಕ ಪಿಂಚಣಿ' ಜಾರಿ ವಿಳಂಬಕ್ಕೆ ನೊಂದು ಯೋಧ ರಾಮ್ ಕಿಶನ್ ಗ್ರೇವಾಲ್ ಆತ್ಮಹತ್ಯೆ ಮಾಡಿಕೊಂಡ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೋದಿ ವಿರುದ್ಧ ಆರೋಪಕ್ಕೆ ಇಳಿದುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ನಾಯ್ಡು, ಪ್ರಚಾರಕ್ಕಾಗಿ ಮೋದಿ ಹೆಸರನ್ನು ಎಲ್ಲ ವಿಷಯದಲ್ಲೂ ಎಳೆದು ತರಲಾಗುತ್ತಿದೆ ಎಂದಿದ್ದಾರೆ.
ಮುಂದುವರೆದ ನಾಯ್ಡು ಈ ಮೊದಲು ಎಲ್ಲದ್ದಕ್ಕೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಡೆ ಬೆರಳು ತೋರಲಾಗುತ್ತಿತ್ತು. ಮತ್ತೀಗ ಎಲ್ಲದಕ್ಕೂ ಪ್ರಧಾನಿ ಮೋದಿಯನ್ನು ಗುರಿಯಾಗಿಸಲಾಗುತ್ತಿದೆ. ಮೊದಲು ಮಳೆಯಾಗದಿದ್ದರೂ, ಯಾರಿಗಾದರೂ ಮಕ್ಕಳಾಗದಿದ್ದರೂ ಸಂಘವನ್ನೇ ದೂರಲಾಗುತ್ತಿತ್ತು ಎಂದು ನಾಯ್ಡು ಕುಹಕವಾಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ನಿಂದಿಸಲು, ಅವರ ವರ್ಚಸ್ಸನ್ನು ಹಾಳುಗೆಡವಲು ರಾಹುಲ್ ಮತ್ತು ಕೇಜ್ರಿವಾಲ್ ಸ್ಪರ್ಧೆಗಿಳಿದಿದ್ದಾರೆ, ಎಂದು ಬಿಜೆಪಿ ಆರೋಪಿಸಿದೆ.