ಮುಸ್ಲಿಮರು ಕೆಎಫ್‌ಸಿಯಲ್ಲಿ ಚಿಕನ್ ತಿನ್ನುವುದು ಮಹಾಪಾಪ: ಫತ್ವಾ ಹೊರಡಿಸಿದ ಮೌಲ್ವಿ

ಮಂಗಳವಾರ, 16 ಆಗಸ್ಟ್ 2016 (18:32 IST)
ವಿಶ್ವದಾದ್ಯಂತ ಜನಪ್ರಿಯತೆ ಪಡೆದಿರುವ ಕೆಂಟುಕಿ ಫ್ರೈಡ್ ಚಿಕನ್(ಕೆಎಫ್‌ಸಿ) ಮಳಿಗೆಗಳಲ್ಲಿ ಮುಸ್ಲಿಮರು ಚಿಕನ್ ತಿನ್ನುವುದು ಮಹಾಪಾಪ ಎಂದು ನಗರದ ದರ್ಗಾ-ಎ-ಅಲಾ ಹಜರತ್ ಮಸೀದಿಯ ಮೌಲ್ನಿಗಳು ಫತ್ವಾ ಹೊರಡಿಸಿದ್ದಾರೆ.
 
ಹಿರಿಯ ಮೌಲ್ವಿ ಮುಫ್ತಿ ಸಲೀಮ್ ನೂರಿ ಮಾತನಾಡಿ, ಕೆಎಫ್‌ಸಿ ಔಟ್‌ಲೆಟ್‌ಗಳಲ್ಲಿ ದೊರೆಯುವ ಚಿಕನ್ ಹಲಾಲ್‌ಆಗದಿರುವುದರಿಂದ ಮತ್ತು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ. ಕೆಎಫ್‌ಸಿ ಮಳಿಗೆಗಳಲ್ಲಿ ಮುಸ್ಲಿಮರ ಎದುರು ಚಿಕನ್ ತಯಾರಿಸದಿರುವುದರಿಂದ ಇಸ್ಲಾಂನಲ್ಲಿ ಹರಾಮ್ ಎನ್ನುವ ಅಪಖ್ಯಾತಿ ಪಡೆದಿದೆ ಎಂದು ತಿಳಿಸಿದ್ದಾರೆ. 
 
ಕೆಎಫ್‌ಸಿ ಮಳಿಗೆಗಳಲ್ಲಿ ಪ್ರಮಾಣ ಪತ್ರಗಳನ್ನು ಲಗತ್ತಿಸಲಾಗಿರುತ್ತದೆ. ಆದರೆ, ಅದರಲ್ಲಿ ಯಾವ ರೀತಿ ಚಿಕನ್ ಸಂಸ್ಕರಣ ಮಾಡಲಾಗುತ್ತದೆ ಎನ್ನುವ ಬಗ್ಗೆ ಮಾಹಿತಿಯಿರುವುದಿಲ್ಲ ಎಂದು ಹೇಳಿದ್ದಾರೆ.
 
ಇಸ್ಲಾಂ ಧರ್ಮದಲ್ಲಿರುವ ನಿಯಮಗಳಂತೆ ಚಿಕನ್ ಆಹಾರ ತಯಾರಿಸುವುದಿಲ್ಲವಾದ್ದರಿಂದ ಇಸ್ಲಾಂ ಧರ್ಮಕ್ಕೆ ಮತ್ತು ಶರಿಯತ್ ಕಾನೂನಿಗೆ ವಿರುದ್ಧವಾಗಿದೆ ಎಂದಿದ್ದಾರೆ.
 
ಇದಕ್ಕಿಂತ ಮೊದಲು ಇದೇ ಮೌಲ್ವಿ ಪೋಕೆಮೋನ್ ಗೋ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ಫತ್ವಾ ಹೊರಡಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ