ರ್ಯಾಲಿಗಳಲ್ಲಿ ಭಾಗವಹಿಸಲು, ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಹಣ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಇತರರಿಂದ ಹಣ ಪಡೆಯಿರಿ, ಆದರೆ ಕಮಲಕ್ಕೆ ಮತ ನೀಡಿ ಎಂದು ಹೇಳುವ ಮೂಲಕ ಪರಿಕ್ಕರ್ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸಹ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು, "ಬಿಜೆಪಿ, ಕಾಂಗ್ರೆಸ್ ಎಷ್ಟೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ. ಹೊಸ ನೋಟನ್ನು ಮಾತ್ರ ಸ್ವೀಕರಿಸಿ. ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು 5,000 ನೀಡಿದರೆ 10,000 ಕೇಳಿ ಪಡೆದುಕೊಳ್ಳಿ. ಆದರೆ ನಮ್ಮ ಪಕ್ಷಕ್ಕೆ ಮತ ನೀಡಿ", ಎಂದು ಅವರು ಕರೆ ಕೊಟ್ಟಿದ್ದರು. ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಚುನಾವಣಾ ಆಯೋಗ ಗೋವಾದ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.