ಸುದ್ದಿವಾಹಿನಿ ನಿಷೇಧ; ತುರ್ತು ಪರಿಸ್ಥಿತಿ ದಿನ ನೆನಪಿಸುತ್ತದೆ ಎಂದ ಸಂಪಾದಕರ ಸಂಘ
ಶನಿವಾರ, 5 ನವೆಂಬರ್ 2016 (15:12 IST)
ಸುದ್ದಿವಾಹಿನಿ ಎನ್‌ಡಿ ಟಿವಿ ಮೇಲೆ ನವೆಂಬರ್ 9 ರಂದು 24ಗಂಟೆಗಳ ನಿಷೇಧ ಹೇರಿರುವುದನ್ನು ಖಂಡಿಸಿರುವ ಭಾರತೀಯ ಸಂಪಾದಕರ ಸಂಘ ಕೇಂದ್ರ ಸರ್ಕಾರದ ಈ ಧೋರಣೆ ತುರ್ತುಪರಿಸ್ಥಿತಿ ದಿನಗಳನ್ನು ನೆನಪಿಸುತ್ತಿದೆ ಎಂದಿದೆ.
ಸುದ್ದಿವಾಹಿನಿ ಮೇಲೆ ಒಂದು ದಿನದ ಮಟ್ಟಿಗೆ ನಿಷೇಧ ಹೇರಿರುವುದು ಮಾಧ್ಯಮ ಮತ್ತು ಭಾರತೀಯ ನಾಗರಿಕ ಸ್ವಾತಂತ್ರ್ಯದ ನೇರ ಉಲ್ಲಂಘನೆ. ಇದು ತುರ್ತು ಪರಿಸ್ಥಿತಿಯ ನೆನಪನ್ನು ಮರುಕಳಿಸಿದೆ. ತಕ್ಷಣಕ್ಕೆ ಸರ್ಕಾರ ಈ ಆದೇಶವನ್ನು ಹಿಂಪಡೆಯಬೇಕು ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಪಠಾಣ್ ಕೋಟ್ ಉಗ್ರರ ದಾಳಿ ಸಂದರ್ಭದ ಸೂಕ್ಷ್ಮ ವಿಚಾರಗಳನ್ನು ಬಿತ್ತರಿಸಿ, ಪ್ರಸಾರ ನಿಯಮ ಉಲ್ಲಂಘಿಸಿದ ಆರೋಪದಡಿ ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 10ರ ಮಧ್ಯರಾತ್ರಿಯವರೆಗೆ 24ಗಂಟೆ ಯಾವುದೇ ಕಾರ್ಯಕ್ರಮ, ಸುದ್ದಿ ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ಎನ್‌ಡಿ ಟಿವಿಗೆ ಆದೇಶಿಸಿದೆ.
ನೀವು ಬಿತ್ತರಿಸಿರುವ ಮಾಹಿತಿ ಉಗ್ರರ ಕೈಗೆ ಸಿಕ್ಕರೆ ಕೇವಲ ದೇಶದ ಭದ್ರತೆಗಷ್ಟೇ ಅಲ್ಲ, ನಾಗರಿಕರ ಮತ್ತು ಭದ್ರತಾ ಸಿಬ್ಬಂದಿ ಜೀವಕ್ಕೂ ಹಾನಿ ತಲುಪಿಸುವಂತದ್ದು ಎಂದು ಕೇಂದ್ರ ಸುದ್ದಿ ವಾಹಿನಿಗೆ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ