ದೇಶದಲ್ಲೀಗ ಶಿಕ್ಷಣ ತುಂಬಾ ದುಬಾರಿ !

ಮಂಗಳವಾರ, 23 ಆಗಸ್ಟ್ 2022 (08:11 IST)
ನವದೆಹಲಿ : ದೇಶದಲ್ಲಿ ಈಗ ಶಿಕ್ಷಣ ತುಂಬಾ ದುಬಾರಿಯಾಗಿದೆ. ಬೆಳೆಯುತ್ತಿರುವ ತಾಂತ್ರಿಕತೆಗೆ ತಕ್ಕಂತೆ ವೇಗವಾಗಿ ಮುನ್ನುಗ್ಗಬೇಕೆಂಬ ಉತ್ಸಾಹದಿಂದ ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣವನ್ನೇ ಕೊಡಿಸಲು ಪೋಷಕರು ಬಯಸುತ್ತಿದ್ದಾರೆ.

ಹಾಗಾಗಿಯೇ ಖಾಸಗಿ ಶಾಲೆಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಶಿಕ್ಷಣವೂ ದುಬಾರಿಯಾಗಿದೆ. ಇತ್ತೀಚಿನ ಅಧ್ಯಯನ ವರದಿಗಳೂ ತಮ್ಮ ಸಂಶೋಧನೆಯ ಮೂಲಕ ಅದನ್ನು ಸಾಬೀತು ಮಾಡಿವೆ. ಆರ್ಥಿಕ ತೊಂದರೆಗಳು ಎದುರಾಗುತ್ತಿದ್ದರೂ ಶಾಲಾ-ಕಾಲೇಜುಗಳು ಮಾತ್ರ ಕಡಿಮೆಯಾಗುತ್ತಿಲ್ಲ ಎಂಬುದನ್ನು ತಜ್ಞರೂ ಒಪ್ಪಿಕೊಂಡಿದ್ದಾರೆ.

ಇ.ಟಿ. (ಎಜುಫಂಡ್) ಆನ್ಲೈನ್ ಸಂಶೋಧನೆಯ ಪ್ರಕಾರ ಭಾರತದಲ್ಲಿ ಒಂದು ಮಗು 3 ವರ್ಷದಿಂದ 17 ವರ್ಷದ ವರೆಗೆ ಶಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯಲು ಕನಿಷ್ಠ 30 ಲಕ್ಷ ರೂ. ವೆಚ್ಚ ಮಾಡಬೇಕಿದೆ ಎಂದು ಹೇಳಿದೆ. 

10 ವರ್ಷದ ಹಳೆಯ ಸೂತ್ರದ ಪ್ರಕಾರವೇ ಸಂಶೋಧನೆ ಮಾಡಲಾಗಿದ್ದು, ಅಂಕಿ-ಅಂಶ ನಿಖರ ಎಂದು ಹೇಳಲಾಗುವುದಿಲ್ಲ. ಇದಕ್ಕಿಂತಲೂ ಹೆಚ್ಚಿನ ವೆಚ್ಚವೂ ಆಗಬಹಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಎಜುಫಂಡ್ ಪ್ರಕಾರ, 2012 ರಿಂದ 2020ರ ನಡುವೆ ಭಾರತದಲ್ಲಿ ಶೈಕ್ಷಣಿಕ ವೆಚ್ಚವು ಶೇ.10 ರಿಂದ 12 ಪ್ರತಿಶತದಷ್ಟು ಹೆಚ್ಚಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ