ಭೂಮಿಯನ್ನು ಹಿಂದೂ ರಾಷ್ಟ್ರೋತ್ತಾನ ಪರಿಷತ್‌ಗೆ ನೀಡಲು ಯತ್ನ

ಸೋಮವಾರ, 1 ಆಗಸ್ಟ್ 2022 (16:55 IST)
ಕ್ಯಾಂಪಸ್ ಫ್ರಂಟ್
 ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹೆಸರಿನಲ್ಲಿರುವ 5ಎಕರೆ ಜಮೀನನ್ನು ಹಿಂದೂ ರಾಷ್ಟ್ರೋತ್ಥಾನ ಪರಿಷತ್‌ಗೆ ಬಿಜೆಪಿ ಸರ್ಕಾರ ಮಂಜೂರು ಮಾಡಲು ಹೊರಟಿದೆ . ಇನ್ನು ಈ ನಡೆಯನ್ನ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಕ್ರೋಶ ವ್ಯಕ್ತಪಡಿಸಿದೆ.
 
ರಾಜ್ಯವನ್ನು ಸಂಘಪರಿವಾರದ ಕೈಗೆ ಕೊಡಲು ರಾಜ್ಯ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಶಿಕ್ಷಣಕ್ಕಾಗಿ ಮೀಸಲಿಟ್ಟ ಜಮೀನನ್ನು ಆರೆಸ್ಸೆಸ್‌ನ ಅಂಗ ಸಂಸ್ಥೆಗಳಿಗೆ ಮಂಜೂರು ಮಾಡಲು ಹೊರಟಿರುವ ರಾಜ್ಯದ ಜನತೆಗೆ ಮಾಡಿರುವ ದ್ರೋಹವಾಗಿದೆ. ಸದಾ ದೊಂಬಿ, ಗಲಭೆ, ಗಲಾಟೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬಿಜೆಪಿಯ ಮಾತೃಸಂಸ್ಥೆ ಸಂಘಪರಿವಾರಕ್ಕೆ ಮಂಜೂರು ಮಾಡಲು ಹೊರಡುವ ಮೂಲಕ ಸರ್ಕಾರಿ ಪ್ರಾಯೋಜಿತವಾಗಿ ರಾಜ್ಯದ ಶಾಂತಿ ನೆಮ್ಮದಿಗೆ ಭಂಗವುಂಟು ಮಾಡಲು ಹೊರಟಿದೆ. ಸಚಿವ ಸಂಪುಟಕ್ಕೆ ಸಂಘಪರಿವಾರದ ಮೇಲೆ ಪ್ರೇಮ ಅಷ್ಟೊಂದಿದ್ದರೆ ಮುಖ್ಯಮಂತ್ರಿ ಮತ್ತು ಸಚಿವರ ಸೊತ್ತಿನಿಂದ ಸಂಘಪರಿವಾರದ ಕಚೇರಿ ನಿರ್ಮಾಣಕ್ಕೆ ಜಮೀನು ನೀಡಲಿ ಹೊರತು ರಾಜ್ಯದ ಸರ್ಕಾರಿ ಸೊತ್ತಿನಿಂದಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದಾರೆ.
 
ಅಲ್ಪಸಂಖ್ಯಾತರ ಅಭಿವೃದ್ಧಿ ವಿಚಾರದಲ್ಲಿ ಸದಾ ಅಸಡ್ಡೆ ಧೋರಣೆ ತಾಳುವ ಬೊಮ್ಮಾಯಿ ಸರ್ಕಾರ ಇದೀಗ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ಹಲವಾರು ಯೋಜನೆಗಳನ್ನು ನಿಲ್ಲಿಸಿ ಇದೀಗ ಮತ್ತೆ ಅಲ್ಪಸಂಖ್ಯಾತರ ಮೀಸಲಿಡಲಾಗಿದೆ ಭೂಮಿಯನ್ನೇ ಅಲ್ಪಸಂಖ್ಯಾತರ ವಿರುದ್ಧ ಸದಾ ಧ್ವೇಷ ಕಾರುವ ಸಂಘಪರಿವಾರದ ಅಂಗಸಂಸ್ಥೆಯಾದ ಹಿಂದೂ ರಾಷ್ಟ್ರೋತ್ಥಾನ ಪರಿಷತ್ತಿಗೆ ಸರ್ಕಾರವು ನೀಡುತ್ತಿರುವ ದಬ್ಬಾಳಿಕೆ ಕ್ಯಾಂಪಸ್ ಫ್ರಂಟ್ ಕಿಡಿಕಾರಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ