ಘಟನೆ ವಿವರ: 68 ವರ್ಷದ ಮಹಿಳೆ ಮಂಜುಳಾ ವಿತ್ಲಾನಿ ಮತ್ತು ಆಕೆಯ ಪತಿ ನಟವರರಾಲ್ ಮನೆಯ ಕೆಳಮಹಡಿಯಲ್ಲಿ ವಾಸಿಸುತ್ತಿದ್ದರು. ಆಕೆಯ ಮಗ ಆಶೀಶ್ ಪತ್ನಿ ನಿಶಾ ಜತೆಯಲ್ಲಿ ಮೊದಲ ಮಹಡಿಯಲ್ಲಿ ವಾಸವಾಗಿದ್ದ. ಸೋಮವಾರ ನಸುಕಿನ ಜಾವ 4 ಗಂಟೆಗೆ ಆಶೀಶ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಆತನ ಪತ್ನಿ ಔಷಧಿ ತೆಗೆದುಕೊಂಡು ಹೋಗಲು ಕೆಳ ಮಹಡಿಗೆ ಧಾವಿಸಿದ್ದಾಳೆ. ಮಗನ ಆರೋಗ್ಯ ಕೆಟ್ಟಿದೆ ಎಂದು ಆತಂಕದಿಂದ ತಾಯಿ ಮಂಜುಳಾ ಸಹ ಗಡಿಬಿಡಿಯಲ್ಲಿ ಮೊದಲ ಮಹಡಿಯ ಮೆಟ್ಟಿಲುಗಳನ್ನು ಏರುತ್ತಿರುವಾಗ ಪತಿ ನಟವರಲಾಲ್ ಆಕೆಯನ್ನು ಹಿಂಬಾಲಿಸಿದ್ದಾನೆ. ಆ ಸಂದರ್ಭದಲ್ಲಿ ಮಂಜುಳಾ ಜಾರಿ ತನ್ನನ್ನು ಹಿಂಬಾಲಿಸುತ್ತಿದ್ದ ಪತಿಯ ಮೈಮೇಲೆ ಬಿದ್ದಿದ್ದಾರೆ. ಪರಿಣಾಮ ಪತಿ ಆಕೆಯ ದೇಹದಡಿ ಸಿಕ್ಕು ಅಪ್ಪಚ್ಚಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮೆದುಳಿನ ರಕ್ತಸ್ರಾವದಿಂದಾಗಿ ಇಬ್ಬರು ಮೃತ ಪಟ್ಟಿದ್ದಾರೆ.