ಚುನಾವಣೆ : ಕರ್ನಾಟಕದ 4 ಮತಗಳು ತಿರಸ್ಕೃತ

ಶುಕ್ರವಾರ, 22 ಜುಲೈ 2022 (09:41 IST)
ನವದೆಹಲಿ : ಕರ್ನಾಟಕ 224 ಮತಗಳ ಪೈಕಿ ನಾಲ್ವರು ಶಾಸಕರ ಮತಗಳು ತಿರಸ್ಕೃತವಾಗಿದೆ. ಕಾಂಗ್ರೆಸ್ ಶಾಸಕರ ಎಲ್ಲಾ ಮತಗಳು ಅರ್ಹವಾಗಿವೆ.
 
ದ್ರೌಪದಿ ಮುರ್ಮು ಅವರಿಗೆ ಬಿಜೆಪಿ ಜೊತೆ ಜೆಡಿಸ್ ಬೆಂಬಲ ನೀಡಿದ್ದರಿಂದ ಒಟ್ಟು 154 ಮತಗಳು ಬೀಳಬೇಕಿತ್ತು. ಆದರೆ 150 ಮತಗಳು ಬಿದ್ದಿದ್ದು 4 ಮತಗಳು ತಿರಸ್ಕೃತಗೊಂಡಿದೆ. ಕಾಂಗ್ರೆಸ್ನ 70 ಶಾಸಕರ ಮತಗಳು ಯಶವಂತ ಸಿನ್ಹಾ ಅವರಿಗೆ ಬಿದ್ದಿದೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷಗಳು ವಿಪ್ ಜಾರಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿ, ಜೆಡಿಎಸ್ ಶಾಸಕರ ಪೈಕಿ ಯಾರು ಈ ತಪ್ಪು ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ