ಚುನಾವಣೆ : ಸಾಲಲ್ಲಿ ನಿಂತು ಮತ ಚಲಾಯಿಸಿದ ಮೋದಿ

ಸೋಮವಾರ, 5 ಡಿಸೆಂಬರ್ 2022 (13:33 IST)
ಗಾಂಧೀನಗರ : ಪ್ರಧಾನಿ ಮೋದಿ ತವರು ಗುಜರಾತ್ ವಿಧಾನಸಭಾ ಚುನಾವಣೆ  ಅಂತಿಮ ಹಂತ ತಲುಪಿದೆ. ಇಂದು 2ನೇ ಹಂತದ ಮತದಾನ ನಡೆಯುತ್ತಿದ್ದು, ಅಹಮದಾಬಾದ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ ಚಲಾಯಿಸಿದರು.

ಪ್ರಧಾನಿಯವರು ನಿಶಾನ್ ಪಬ್ಲಿಕ್ ಸ್ಕೂಲ್ನಲ್ಲಿರುವ ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಕ್ಯೂನಲ್ಲಿ ನಿಂತಿದ್ದ ಜನಸಮೂಹದತ್ತ ಹೋದರು. ನಂತರ ಜನರಿಗೆ ನಮಸ್ಕರಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. 

ರಾಜ್ಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮೋದಿ ಮನವಿ ಮಾಡಿದರು. ಇಂದು ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ