ಇಂದು ತೆಲಂಗಾಣ ಹಾಗೂ ರಾಜಸ್ಥಾನ ವಿಧಾನಸಭಾ ಕ್ಷೇತ್ರಗಳ ಚುನಾವಣೆ

ಶುಕ್ರವಾರ, 7 ಡಿಸೆಂಬರ್ 2018 (09:01 IST)
ನವದೆಹಲಿ : ಇಂದು ತೆಲಂಗಾಣ ಹಾಗೂ ರಾಜಸ್ಥಾನ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಮತದಾನ ಆರಂಭವಾಗಿದೆ.


ರಾಜಸ್ಥಾನದಲ್ಲಿ 200 ವಿಧಾನಸಭಾ ಕ್ಷೇತ್ರಗಳಿದ್ದು, 4 ಕೋಟಿ 75 ಲಕ್ಷ ಮತದಾರರಿದ್ದಾರೆ. ಹಾಗೇ 2,200 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶವಿದೆ.


 ಮತದಾನಕ್ಕಾಗಿ 51,687 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮಹಿಳೆಯರ ಮತದಾನಕ್ಕಾಗಿ ವಿಶೇಷ ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ ದಿವ್ಯಾಂಗ ಮತದಾರರಿಗೂ ವಿಶೇಷ ಬೂತ್ ಸ್ಥಾಪಿಸಲಾಗಿದ್ದು, ಮತದಾನಕ್ಕೆ ತೆರಳಲು ವಾಹನ ವ್ಯವಸ್ಥೆ ಮಾಡಲಾಗಿದೆ. ರಾಜಸ್ಥಾನದಲ್ಲಿ  2ಲಕ್ಷ ಇವಿಎಂ ಬಳಕೆ ಜೊತೆಗೆ ಇದೇ ಮೊದಲ ಬಾರಿ ವಿವಿಪ್ಯಾಟ್ ಅಳವಡಿಸಲಾಗಿದ್ದು 30 ಸಾವಿರ ಮಹಿಳಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ನೇಮಿಸಲಾಗಿದೆ.


ಹಾಗೇ ತೆಲಂಗಾಣ ರಾಜ್ಯದಲ್ಲಿ 119 ವಿಧಾನಸಭಾ ಕ್ಷೇತ್ರಗಳಿದ್ದು, 2ಕೋಟಿ 80 ಲಕ್ಷ ಮತದಾರರಿದ್ದಾರೆ. 31 ಜಿಲ್ಲೆಗಳಲ್ಲಿ 32.815 ಮತಗಟ್ಟೆಗಳನ್ನು ತೆರೆಯಲಾಗಿದ್ದು, 1821 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಹಾಗೇ1ಲಕ್ಷದ 60 ಸಾವಿರ ಮತಗಟ್ಟೆ ಸಿಬ್ಬಂದಿಗಳನ್ನು ನೇಮಕಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ