ಆರೋಪಿಯನ್ನು ಬಂಧಿಸುವ ಬದಲು ಕಿಡ್ನ್ಯಾಪ್ ಮಾಡಿ ಹಣದ ಬೇಡಿಕೆಯಿಟ್ಟ ಪೊಲೀಸರು ಅರೆಸ್ಟ್

ಶುಕ್ರವಾರ, 7 ಡಿಸೆಂಬರ್ 2018 (06:35 IST)
ನವದೆಹಲಿ : ವಂಚನೆ ಆರೋಪದ ಮೇಲೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರೇ ಅಪಹರಿಸಿ ಹಣಕ್ಕಾಗಿ ಆತನ ಮನೆಯವರಲ್ಲಿ ಬೇಡಿಕೆ ಇಟ್ಟ ವಿಚಿತ್ರ ಪ್ರಕರಣವೊಂದು ದೆಹಲಿಯಲ್ಲಿ ನಡೆದಿದೆ.


ಪ್ರಧಾನ್ ಪೊಲೀಸರಿಂದ ಕಿಡ್ನ್ಯಾಪ್ ಆದ ಆರೋಪಿಯಾಗಿದ್ದು, ದೆಹಲಿಯ ರಣಹೋಲಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌  ಸುಬೆ ಸಿಂಗ್, ಮುಖ್ಯ ಪೇದೆ ಇಂಧು ಪಾವಟ್, ಪೇದೆ ಅಜಯ್ ಕುಮಾರ್ ಅಪಹರಣ ಮಾಡಿದ ಪೊಲೀಸರು.


ಚಂಡೀಗಢದಲ್ಲಿ ಆರು ಜನರ ಮೇಲೆ ವಂಚನೆ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಆರೋಪಿ ಪ್ರಧಾನ್ ಪರಾರಿಯಾಗಿದ್ದ. ಆರೋಪಿ ಪ್ರಧಾನ್ ದೆಹಲಿಯಲ್ಲಿರುವ ಬಗ್ಗೆ  ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸುವ ಬದಲು ಅಪಹರಿಸಿ ಉತ್ತಮ್‍ ನಗರದ ಮನೆಯೊಂದರಲ್ಲಿ ಕೂಡಿ ಹಾಕಿ, ನಂತರ ಆರೋಪಿಯ ಪತ್ನಿಗೆ ಕರೆ ಮಾಡಿ 1.5 ಕೋಟಿ ರೂ. ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲು ನಿರಾಕರಿಸಿದರೆ ಪ್ರಧಾನ್ ಮೇಲೆ ಈಗಾಗಲೇ ಇರುವ ವಂಚನೆ ಪ್ರಕರಣದ ಜೊತೆಗೆ ಸುಳ್ಳು ಕೇಸ್‍ಗಳನ್ನು ಹಾಕುವುದಾಗಿ ಬೆದರಿಸಿದ್ದಾರೆ.


ಈ ವಿಚಾರವನ್ನು ಪ್ರಧಾನ್ ಕುಟುಂಬದವರು ಹಿರಿಯಾ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ ಕಾರಣ ಅಪಹರಣದಲ್ಲಿ ಭಾಗಿಯಾಗಿದ್ದ ಮೂವರು ಪೊಲೀಸರನ್ನು ಕರ್ತವ್ಯದಿಂದ ವಜಾಗೊಳಿಸಿ ಬಂಧಿಸಿದ್ದಾರೆ. ಈ ಘಟನೆ ಕುರಿತು ದೆಹಲಿಯ ರಣಹೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪೊಲೀಸರನ್ನು  ವಿಚಾರಣೆಗೆ ಒಳಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ