ಮತ್ತೆ ವಿಶ್ವದ ನಂ.1 ಶ್ರೀಮಂತನಾದ ಎಲಾನ್ ಮಸ್ಕ್

ಗುರುವಾರ, 1 ಜೂನ್ 2023 (10:32 IST)
ವಾಷಿಂಗ್ಟನ್ : ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್ ಮಸ್ಕ್ ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಐಒಗಿಊ ಷೇರುಗಳ ಬೆಲೆ ಕುಸಿತ ಕಂಡ ನಂತರ ಖ್ಯಾತ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನ ಹಿಂದಿಕ್ಕಿ, ಮಸ್ಕ್ ನಂ.1 ಸ್ಥಾನಕ್ಕೇರಿದ್ದಾರೆ.
 

ಬುಧವಾರ ಪ್ಯಾರಿಸ್ನ ವಹಿವಾಟಿನಲ್ಲಿ ಅರ್ನಾಲ್ಟ್ನ ಐಒಗಿಊ ಷೇರುಗಳ ಬೆಲೆ 2.6% ಕಡಿಮೆಯಾಗಿದೆ ಬ್ಲೂಮ್ಬರ್ಗ್ ವರದಿ ಮಾಡಿದೆ. ಅಲ್ಲದೇ ಎಲ್ವಿಎಂಹೆಚ್ ಷೇರುಗಳ ಬೆಲೆ ಕಳೆದ ಏಪ್ರಿಲ್ನಿಂದ ಸುಮಾರು 10 ಪ್ರತಿಶತದಷ್ಟು ಕುಸಿತ ಕಂಡಿದೆ. ಇದರಿಂದ ಒಂದೇ ದಿನದಲ್ಲಿ ಅರ್ನಾಲ್ಟ್ ಸಂಪತ್ತಿನ ಮೌಲ್ಯದಲ್ಲಿ ಏಕಾಏಕಿ 11 ಶತಕೋಟಿ ಡಾಲರ್ನಷ್ಟು ಸಂಪತ್ತು ಕರಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ