ಲಾಲು ಪುತ್ರಿ ಮಿಸಾ ಭಾರ್ತಿ ನಿವಾಸದ ಮೇಲೆ ಇಡಿ ದಾಳಿ

ಶನಿವಾರ, 8 ಜುಲೈ 2017 (13:13 IST)
ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಿಸಾ ಭಾರ್ತಿ ಅವರ ದೆಹಲಿಯ ಸೈನಿಕ್ ಫಾರ್ಮ್ ನಲ್ಲಿರುವ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
 
ಜಾರಿ ನಿರ್ದೇಶನಾಲಯದವರು ಈ ಹಿಂದೆ ಮೀಸಾ ಭಾರ್ತಿ ಅವರ ಚಾರ್ಟ್‌ರ್ಡ್‌ ಅಕೌಂಟೆಂಟ್‌ ಅನ್ನು ಬಂಧಿಸಿದ್ದರು.ಅಕ್ರಮ ಹಣ ವರ್ಗಾವಣೆ ಮತ್ತು ಕಪ್ಪು ಹಣ ಸಂಗ್ರಹಕ್ಕೆ ಸಂಬಂಧಪಟ್ಟಂತೆ ದೆಹಲಿಯಲ್ಲಿ ಕಳೆದ ಸೋಮವಾರ ರಾಜೇಶ್ ಅಗರ್ವಾಲ್ ಅವರನ್ನು ಬಂಧಿಸಲಾಗಿತ್ತು. ಸುರೇಂದ್ರ ಕುಮಾರ್‌ ಜೈನ್‌ ಮತ್ತು ವೀರೇಂದ್ರ ಜೈನ್‌ ಅವರ ನೆರವಿನೊಂದಿಗೆ ಕಪ್ಪು ಹಣವನ್ನು ಕಾನೂನು ರೀತ್ಯ  ಆದಾಯ ಮೂಲವಾಗಿ ಪರಿವರ್ತಿಸಿರುವ ಆರೋಪ ಅಗ್ರವಾಲ್‌ ಮೇಲಿದೆ. ಜಾರಿ ನಿರ್ದೇಶನಾಲಯದವರು ಕಳೆದ ಮಾರ್ಚ್‌ 20ರಂದು ಜೈನ್‌ ಸಹೋದರರನ್ನು ಬಂಧಿಸಿದ್ದರು.
 
ನಿನ್ನೆಯಷ್ಟೇ ಸಿಬಿಐ ಲಾಲು ಪ್ರಸಾದ್ ಯಾದವ್ ಹಾಗೂ ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿ ಅವರ ಹೆಸರಲ್ಲಿನ ಆಸ್ತಿ-ಪಾಸ್ತಿ ಮೇಲೆ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಇಂದು ಮಿಸಾ ಬಾರ್ತಿ ನಿವಾಸದ ಮೇಲೆ ಇಡಿ ದಾಳಿ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
 

ವೆಬ್ದುನಿಯಾವನ್ನು ಓದಿ