ದೆಹಲಿ ವಿಮಾನ ನಿಲ್ದಾಣದ ಸುತ್ತ ಸೆಕ್ಷನ್ 144 ಜಾರಿ: ಡ್ರೋಣ್‌, ಲೇಸರ್ ಕಿರಣಗಳ ಬಳಕೆ ನಿಷೇಧ

sampriya

ಸೋಮವಾರ, 3 ಜೂನ್ 2024 (17:37 IST)
Photo By X
ಬೆಂಗಳೂರು:  ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಐಜಿಐ) ವಿಮಾನಗಳು ಸಮೀಪಿಸುವ ಮಾರ್ಗದಲ್ಲಿ ಡ್ರೋನ್ ಮತ್ತು ಲೇಸರ್ ಕಿರಣಗಳ ಬಳಕೆಯನ್ನು ನಿಷೇಧಿಸಿ ನಿಷೇಧಾಜ್ಞೆಗಳನ್ನು ವಿಧಿಸಿದ್ದಾರೆ.


ದೆಹಲಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ವಿಐಪಿಗಳು ವಿಮಾನಗಳಲ್ಲಿ ಪ್ರಯಾಣ ಬೆಳೆಸುವುದರಿಂದ ಹಾಗೂ ರಾಷ್ಟ್ರ ರಾಜಧಾನಿಯಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತು ಮುಂಬರುವ ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇರುವುದರಿಂದ ಈ ಕ್ರಮ ಜಾರಿ ಮಾಡಲಾಗಿದೆ.


ಪ್ರಮುಖ ಕಾರ್ಯಕ್ರಮಗಳಿರುವುದರಿಂದ ವಾಯು ಸಂಚಾರದ ಸುರಕ್ಷತೆ ಮತ್ತು ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಈ ಉನ್ನತ ಭದ್ರತಾ ಪ್ರೋಟೋಕಾಲ್‌ನ್ನು ಜಾರಿ ಮಾಡಿದೆ.

ಆದೇಶ ಏನು ಹೇಳಿದೆ?

ಈ ಆದೇಶವು ಜೂನ್‌ ೧ರಿಂದ ಜುಲೈ 30ರ ವರೆಗೆ ಜಾರಿಯಲ್ಲಿರಲಿದೆ.  ಆದೇಶದ ಪ್ರಕಾರ, ಐಜಿಐ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ ಲೇಸರ್ ಕಿರಣಗಳಿಂದ ಪೈಲಟ್‌ಗಳ ದೃಷ್ಟಿಗೆ ಅಡ್ಡಿಪಡಿಸುವ ಘಟನೆಗಳನ್ನು ವರದಿ ಮಾಡಿದೆ, ವಿಶೇಷವಾಗಿ ನವದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸುವಾಗ ಇದು ಉಪದ್ರವದ ಮೂಲ ಮಾತ್ರವಲ್ಲದೆ ಅಪಾಯವನ್ನೂ ಉಂಟುಮಾಡಬಹುದು. ಪ್ರಯಾಣಿಕರು, ಸಿಬ್ಬಂದಿ ಮತ್ತು ವಿಮಾನದ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಲೇಸರ್‌ ಕಿರಣಗಳನ್ನು ನಿಷೇಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ