ನವೆಂಬರ್ 8 ರಂದು ಹಳೆಯ 500 ಮತ್ತು 1,000 ರೂಪಾಯಿ ನೋಟುಗಳ ಮೇಲೆ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ ಡಿಸೆಂಬರ್ 15ರವರೆಗೆ ಬಿಲ್ ಪಾವತಿ ಮಾಡಲು, ಔಷಧ ಖರೀದಿಸಲು, ರೈಲು ನಿಲ್ದಾಣ, ಬಸ್ ಟಿಕೆಟ್ ಬುಕ್ಕಿಂಗ್, ಆಸ್ಪತ್ರೆ, ಹಾಲಿನ ಬೂತ್, ರುದ್ರಭೂಮಿ ಮತ್ತು ಸರ್ಕಾರಿ ಶಾಲಾ ಕಾಲೇಜುಗಳ ಫೀಸ್ ಕಟ್ಟಲು ಮತ್ತು ಇನ್ನಿತರ ಆಯ್ದ ಸ್ಥಳಗಳಲ್ಲಿ ಹಳೆಯ 500 ರೂಪಾಯಿ ನೋಟ್ ಚಲಾವಣೆಗೆ ಅವಕಾಶ ನೀಡಿತ್ತು. ಈ ಅವಧಿಯನ್ನು ವಿಸ್ತರಣೆ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪೆಟ್ರೋಲ್ ಪಂಪ್‌ಗಳಲ್ಲಿ 500 ರೂಪಾಯಿ ಬಳಕೆ ಸೌಲಭ್ಯವನ್ನು ಕೇಂದ್ರ ಡಿಸೆಂಬರ್ 2ರ ಮಧ್ಯರಾತ್ರಿ ಹಿಂತೆಗೆದುಕೊಂಡಿತ್ತು.