ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಪ್ರಬಲ ಸ್ಫೋಟಕ ಪತ್ತೆ: ಬೆಚ್ಚಿಬಿದ್ದ ಶಾಸಕರು

ಶುಕ್ರವಾರ, 14 ಜುಲೈ 2017 (12:55 IST)
ಉತ್ತರ ಪ್ರದೇಶ ವಿಧಾನಸಭೆಯ ವಿಪಕ್ಷ ನಾಯಕ ರಾಮ್ ಗೋವಿಂದ್ ಚೌಧರಿ ಕುರ್ಚಿ ಬಳಿ ಕಸ ಗುಡಿಸುವ ವೇಳೆ ಸ್ವೀಪರ್`ಗಳಿಗೆ ಸಿಕ್ಕಿದ್ದ ಬಿಳಿ ಬಣ್ಣದ ಪುಡಿ ಪ್ರಮಲ ಸ್ಫೋಟಕ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಬೀತಾಗಿದೆ. 60 ಗ್ರಾಂಗಳಿಷ್ಟಿದ್ದ ಪೆಂಟೇರಿ ಥ್ರೆಟೋಲ್ ಟೆಟ್ರಾನಿಟ್ರೇಟ್ ಸ್ಪೋಟಕ ಇದಾಗಿದ್ದು, ಇದರಿಂದ ಇಡೀ ಕಟ್ಟಡವನ್ನೇ ಸ್ಫೋಟಿಸಬಹುದುತ್ತು ಎಂದು ವರದಿಯಾಗಿದೆ.
 

ಸ್ಪೋಟಕ ಪತ್ತೆ ಕುರಿತಂತೆ ಸಿಎಂ ಯೋಗಿ ಆದಿತ್ಯಾನಾಥ್ ತುರ್ತು ಸಂಪು ಸಭೆ ಕರೆದು ಚರ್ಚಿಸಿದ್ದಾರೆ. `ರಾಷ್ಟ್ರೀಯ ತನಿಖಾ ತಂಡದ ಮೂಲಕ ತನಿಖೆ ನಡೆಯಬೇಕೆಂದು ಒತ್ತಾಯಿಸಿರುವ ಯೋಗಿ ಆದಿತ್ಯಾನಾಥ್,  ಕೂಡಲೇ ತನಿಖಾ ತಂಡದ ಆಗಮನಕ್ಕೆ ಆಗ್ರಹಿಸಿದ್ದಾರೆ. ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚರಿಕೆಯಿಂದ ಿರಬೇಕು ಮತ್ತು ಎಲ್ಲ ುದ್ಯೋಗಿಗಳನ್ನ ಪ್ರವೇಶಕ್ಕೂ ಮುನ್ನ ತಪಾಸಣೆಗೆ ಒಳಪಡಿಸುವಂತೆ ಸ್ಪೀಕರ್ ಹೃದಯ್ ನರೇನ್ ದೀಕ್ಷಿತ್ ಆದೇಶಿಸಿದ್ಧಾರೆ.

ಘಟನೆ ಕುರಿತಂತೆ ುನ್ನತಾಧಿಕಾರಿಗಳ ಸಭೆ ಕರೆದು ಸಿಎಂ ಚರ್ಚಿಸಿದ್ದಾರೆ. ಅಗತ್ಯ ಕ್ರಮಗಳನ್ನ ಕೈಗೊಳ್ಳಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಗಾಬರಿಯಾಗಬೇಡಿ ಎಂದು ಶಾಸಕರು ಮತ್ತು ಸಾರ್ವಜನಿಕರಿಗೆ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಮನವಿ ಮಾಡಿದ್ದಾರೆ.

ಸ್ಫೋಟಕ ವಿಧಾನಸಭೆಗೆ ಹೇಗೆ ಬಂತು, ವಿಧಾನಸಭೆಯೇ ಸುರಕ್ಷಿತವಲ್ಲದಿದ್ದರೆ ಉಳಿದ ುತ್ತರ ಪ್ರದೇಶದ ಜನರ ಪರಿಸ್ಥಿತಿ ಏನು..? ಈ ಕೂಡಲೇ ಈ ಬಗ್ಗೆ ತನಿಖೆ ನಡೆಯಬೇಕೆಂಬ ವಿಪಕ್ಷ ನಾಯಕ ರಾಜೇಂದ್ರ ಚೌಧರಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ