ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ರಾಜ್ಯಸಭೆ ಅಭ್ಯರ್ಥಿಗಳಿಗೆ ಮಾಯಾವತಿ ಪಕ್ಷ ಬೆಂಬಲ

ಮಂಗಳವಾರ, 7 ಜೂನ್ 2016 (15:10 IST)
ಮುಂದಿನ ವರ್ಷ ಆರಂಭದಲ್ಲಿ ವಿಧಾನಸಭೆ ಚುನಾವಣೆ ಮುಂದಿರುವಂತೆಯೇ ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಮೈತ್ರಿಗಾಗಿ ರಣತಂತ್ರ ರೂಪಿಸುತ್ತಿರುವುದು ಬಹಿರಂಗವಾಗಿದೆ.
 
ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ ಮಾತನಾಡಿ, ಮಾಯಾವತಿ ನೇತೃತ್ವದ ಬಿಎಸ್‌ಪಿ ಪಕ್ಷ ಮತ್ತು ಇತರ ಜಾತ್ಯಾತೀತ ಪಕ್ಷಗಳು  ಕಾಂಗ್ರೆಸ್ ಪಕ್ಷದ ರಾಜ್ಯಸಭೆ ಅಭ್ಯರ್ಥಿಯಾಗಲಿರುವ ಕಪಿಲ್ ಸಿಬಲ್ ಅವರಿಗೆ ಬೆಂಬಲ ಸೂಚಿಸಲಿವೆ ಎಂದರು. 
 
ಕಪಿಲ್ ಸಿಬಲ್  ದೇಶದ ಖ್ಯಾತ ವಕೀಲರಾಗಿದ್ದರಿಂದ ಅವರಿಗೆ ಆರಂಭದಲ್ಲಿಯೇ ಟಿಕೆಟ್ ನೀಡಲಾಗುವುದಿಲ್ಲ. ಅವರ ಗೆಲುವನ್ನು ಖಚಿತಪಡಿಸಿಕೊಂಡ ನಂತರ ಟಿಕೆಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ. 
 
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಸಭೆ ಅಭ್ಯರ್ಥಿಯಾಗಿದ್ದ ವಿವೇಕ್ ಟಂಕಾ ಅವರನ್ನು ಬಿಎಸ್‌ಪಿ ಬೆಂಬಲಿಸಿದ್ದಲ್ಲದೇ ಉತ್ತರಾಖಂಡ್ ರಾಜ್ಯದ ಬಹಮತ ಸಾಬೀತಪಡಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. 
 
ಉತ್ತರಪ್ರದೇಶದಲ್ಲಿ 11 ರಾಜ್ಯಸಭೆ ಸ್ಥಾನಗಳಿಗೆ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ