ಪ್ರಧಾನಿ ಮೋದಿ ವಿರುದ್ಧವಾದ ಪೋಸ್ಟ್ ಗಳನ್ನು ಬ್ಲಾಕ್ ಮಾಡಿದ ಫೇಸ್ ಬುಕ್. ಕಾರಣವೇನು ಗೊತ್ತಾ?

ಶುಕ್ರವಾರ, 30 ಏಪ್ರಿಲ್ 2021 (11:27 IST)
ನವದೆಹಲಿ : ಈ ಕೊರೊನಾ ಸಮಯದಲ್ಲಿ ಪ್ರಧಾನಿ ಮೋದಿ ಬಗ್ಗೆ ಹಲವಾರು ಟೀಕೆಗಳು ಕೇಳಿಬಂದಿವೆ. ಹಾಗಾಗಿ ಪ್ರಧಾನಿ ಮೋದಿಯನ್ನು ಟೀಕಿಸಿದ ಪೋಸ್ಟ್ ಗಳನ್ನು ಫೇಸ್ ಬುಕ್ ಕೆಲಕಾಲ  ಬ್ಲಾಕ್ ಮಾಡಿದೆ. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹೌದು. ಕೊರೊನಾ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸುತ್ತಿಲ್ಲವೆಂದು ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕೆಲವು ಪೋಸ್ಟ್ ಗಳನ್ನು ಫೇಸ್ ಬುಕ್ ನಲ್ಲಿ ಮಾಡಲಾಗಿತ್ತು. ಆದರೆ ಫೇಸ್ ಬುಕ್ ಆ ಪೋಸ್ಟ್ ಗಳನ್ನು ಕೆಲಕಾಲ ಬ್ಲಾಕ್ ಮಾಡಿದೆ.

ಇದಿಗ ಈ ಬಗ್ಗೆ ಮಾಹಿತಿ ನೀಡಿದ ಫೇಸ್ ಬುಕ್ ವಕ್ತಾರ, ಅಚಾತುರ್ಯದಿಂದ ತಾತ್ಕಾಲಿಕವಾಗಿ ಈ ಹ್ಯಾಶ್ ಟ್ಯಾಗ್ ನ ಪೋಸ್ಟ್ ಗಳನ್ನು ಬ್ಲಾಕ್ ಮಾಡಿದ್ದೆವು. ಭಾರತ ಸರ್ಕಾರ ಬ್ಲಾಕ್ ಮಾಡಲು ನಮಗೆ ಹೇಳಿರಲಿಲ್ಲ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ