ಪಿಎಂ ಕೇರ್ ಫಂಡ್ ಬಳಸಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾದ ಕೇಂದ್ರ

ಸೋಮವಾರ, 26 ಏಪ್ರಿಲ್ 2021 (09:42 IST)
ನವದೆಹಲಿ: ವಿಪತ್ತು ನಿರ್ವಹಣೆಗಾಗಿ ಜನರು ದೇಣಿಗೆಯಾಗಿ ನೀಡುವ ಪಿಎಂ ಕೇರ್ ಫಂಡ್ ಬಳಸಿ 551 ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸುವುದಾಗಿ ಪ್ರಧಾನಿ ಕಾರ್ಯಾಲಯ ತಿಳಿಸಿದೆ.


ಇದಕ್ಕೆ ಈಗಾಗಲೇ ಪಿಎಂ ಕೇರ್ ಫಂಡ್ ಬಳಸಲು ಅನುಮೋದನೆ ದೊರೆತಿದೆ. ದೇಶದಲ್ಲಿ ಕೊರೋನಾ ರೋಗಿಗಳಿಗೆ ಆಕ್ಸಿಜನ್ ಬೇಡಿಕೆ ಹೆಚ್ಚಿರುವ ಹಿನ್ನಲೆಯಲ್ಲಿ ಕೊರತೆ ನೀಗಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಇದಕ್ಕಾಗಿ ಪಿಎಂ ಕೇರ್ ಫಂಡ್ ನಿಂದ 201.58 ಕೋಟಿ ರೂ. ಅನುದಾನವಾಗಿ ಬಳಕೆ ಮಾಡಲಾಗುತ್ತದೆ. ಪ್ರಧಾನಿ ಮೋದಿ ತ್ವರಿತವಾಗಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲು ಸೂಚನೆ ನೀಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ