ಫೇಸ್ ಬುಕ್ ನಲ್ಲಿನ್ನು ಈ ಫೀಚರ್ ಕೂಡಾ ಲಭ್ಯ

ಭಾನುವಾರ, 29 ಮೇ 2022 (09:40 IST)
ಬೆಂಗಳೂರು: ವ್ಯಾಟ್ಸಪ್ ನಲ್ಲಿ ನೀವು ಸ್ಟೇಟಸ್ ಹಾಕಿದರೆ ಯಾರೆಲ್ಲಾ ನೋಡಿದ್ದಾರೆ ಎಂದು ತಿಳಿದುಕೊಳ್ಳಬಹುದು. ಇನ್ನು, ಫೇಸ್ ಬುಕ್ ನಲ್ಲೂ ನಿಮ್ಮ ಪೋಸ್ಟ್ ಗಳನ್ನು ಯಾರೆಲ್ಲಾ ನೋಡಿದ್ದಾರೆ ಎಂಬ ಫೀಚರ್ ಸೇರ್ಪಡೆಯಾಗಲಿದೆ.

ಬಳಕೆದಾರರಿಗೆ ತಮ್ಮ ಖಾತೆಯ ಮೇಲೆ ಇನ್ನಷ್ಟು ನಿಯಂತ್ರಣ ನೀಡಲು ಫೇಸ್ ಬುಕ್ ಸಂಸ್ಥೆ ಇಂತಹದ್ದೊಂದು ಫೀಚರ್ ಸೇರ್ಪಡೆಗೊಳಿಸುತ್ತಿದೆ. ಇದರ ಬಗ್ಗೆ ಈಗಾಗಲೇ ಬಳಕೆದಾರರಿಗೆ ಮಾಹಿತಿ ನೀಡಲು ನೋಟಿಫಿಕೇಷನ್ ಕಳುಹಿಸಲಾಗುತ್ತಿದೆ.

ಇನ್ನು ನೀವು ಮಾಡುವ ಪ್ರತೀ ಪೋಸ್ಟ್ ಗೂ ಯಾರೆಲ್ಲಾ ವೀಕ್ಷಿಸಬಹುದು ಎಂಬ ಆಯ್ಕೆ ಲಭ್ಯವಿರಲಿದೆ.  ಪ್ರೈವೆಸಿ ಸೆಟ್ಟಿಂಗ್ಸ್ ಗೆ ಹೋಗಿ ಆಕ್ಟಿವಿಟಿ ಫೀಡ್ ನಲ್ಲಿ ಸಿಗುವ ಆಯ್ಕೆಯನ್ನು ನೀವು ಬಳಸಿಕೊಳ್ಳಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ