ಫೆಬ್ರವರಿ 9ರಂದು ಬೆಳ್ಳಂಬೆಳಗ್ಗೆ ನವದೆಹಲಿಯ ಸಂಗಮ್ ವಿಹಾರ್`ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಹಣ ಡ್ರಾ ಮಾಡಿದವರಿಗೆ ಶಾಕ್ ಕಾದಿತ್ತು. ಮೊದಲಿಗೆ ಬಂದ 4 ಗರಿ ಗರಿ ನೋಟುಗಳು ನಕಲಿಯಾಗಿದ್ದವು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದಿರಬೇಕಿದ್ದ ಸ್ಥಳದಲ್ಲಿ ಚಿಲ್ದ್ರನ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿತವಾಗಿದೆ. ನೋಟಿನ ಮತ್ತೊಂದೆಡೆ ಭಾರತೀಯ ಮನೋರಂಜನ್ ಬ್ಯಾಂಕ್ ಎಂದು ಮುದ್ರಿಸಲಾಗಿದೆ. ಆರ್`ಬಿಐ ಲೋಗೋ ಜಾಗದಲ್ಲಿ ಎಲೆಗಳ ಚಿತ್ರವಿದೆ. ಆರ್`ಬಿಐ ಸೀಲ್ ಇರಬೇಕಾದ ಜಾಗದಲ್ಲಿ ಪಿಕೆ ಸೀಲ್ ಹಾಕಲಾಗಿದೆ. ನೋಟಿನ ನಂಬರ್ 0000 ಎಂದು ಹಾಕಲಾಗಿದೆ. ಜೊತೆಗೆ ಗವರ್ನರ್ ಸಹಿಯೂ ಇಲ್ಲ. ಕೇಂದ್ರ ಸರ್ಕಾರದ ಬದಲಿಗೆ ಗ್ಯಾರೆಂಟೀಡ್ ಬೈ ಚಿಲ್ದ್ರನ್ ಗೌರ್ನಮೆಂಟ್ ಎಂದಿದೆ.
ರೋಹಿತ್ ಎಂಬಾತ ಎಟಿಎಂನಲ್ಲಿ ಈ ಹಣ ಬಂದಿದೆ ಎಂದು ಹೇಳುತ್ತಿದ್ದು, ಇದರ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ ಎಂದು ವಸಂತ್ ವಿಹಾರ್ ಪೊಲೀಸರು ತಿಳಿಸಿದ್ದಾರೆ.