ಮೆಂತೆ ಅಂದುಕೊಂಡು ಗಾಂಜಾ ಸೊಪ್ಪಿನ ಅಡುಗೆ ಮಾಡಿ ಸೇವಿಸಿದರು!

ಬುಧವಾರ, 1 ಜುಲೈ 2020 (10:18 IST)
ಲಕ್ನೋ: ಉತ್ತರ ಪ್ರದೇಶದ ಕನೌಜ್ ನಲ್ಲಿ ಕುಟುಂಬವೊಂದು ಮೆಂತೆ ಸೊಪ್ಪು ಅಂದುಕೊಂಡು ಗಾಂಜಾ ಸೊಪ್ಪಿನ ಅಡುಗೆ ಮಾಡಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.


ನಿತೇಶ್ ಎಂಬವರು ಸೊಪ್ಪು ಮಾರುವವನ ಬಳಿ ಮೆಂತೆ ಸೊಪ್ಪು ಖರೀದಿ ಮಾಡಿದ್ದಾರೆ. ಆದರೆ ಆತ ಮೆಂತೆ ಸೊಪ್ಪು ಎಂದು ಗಾಂಜಾ ಸೊಪ್ಪಿನ ಕಟ್ಟು ನೀಡಿದ್ದ. ಇದನ್ನು ಅರಿಯದ ನಿತೀಶ್ ತಮ್ಮ ಮನೆಗೆ ಗಾಂಜಾ ಸೊಪ್ಪನ್ನೇ ತೆಗೆದುಕೊಂಡು ಹೋಗಿದ್ದಾರೆ.

ಸಂಜೆ ವೇಳೆ ಗಾಂಜಾ ಸೊಪ್ಪನ್ನು ಮೆಂತೆ ಸೊಪ್ಪು ಅಂದುಕೊಂಡು ಪಲ್ಯ ತಯಾರಿಸಿದ್ದರು. ಆದರೆ ಇದನ್ನು ಸೇವಿಸಿದ ಬಳಿಕ ಕುಟುಂಬಸ್ಥರೆಲ್ಲರೂ ಅಸ್ವಸ್ಥರಾದರು. ತಕ್ಷಣವೇ ನೆರೆಮನೆಯವರು ವೈದ್ಯರಿಗೆ ಕರೆ ಮಾಡಿದ್ದಾರೆ. ಇವರನ್ನು ಪರಿಶೀಲಿಸಿದ ಬಳಿಕ ಎಡವಟ್ಟು ಬೆಳಕಿಗೆ ಬಂದಿದೆ. ಇದೀಗ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ