ಹಾವು ಓಡಿಸಲು ಹಾಕಿದ ಹೊಗೆ ಮನೆಯನ್ನೇ ಸುಟ್ಟಿತು!
ಮನೆಯೊಳಗೆ ಕಾಳಿಂಗ ಸರ್ಪವೊಂದು ಹೋಗಿದ್ದು ನೋಡಿ ಗಾಬರಿಗೊಂಡ ಮನೆಯವರು ಬೆರಣಿಗೆ ಬೆಂಕಿ ಹಾಕಿ ಹೊಗೆ ಹಾಕಿದ್ದರು. ಹೊಗೆ ತಾಕಿದರೆ ಹಾವು ಓಡಬಹುದು ಎಂಬ ಯೋಜನೆ ಅವರದ್ದಾಗಿತ್ತು.
ಆದರೆ ದುರಾದೃಷ್ಟವಶಾತ್ ಹಾವಿಗೆ ಹೊಗೆ ಹಾಕಲು ಹಚ್ಚಿದ್ದ ಬೆಂಕಿ ಮನೆಯನ್ನೇ ಸುಟ್ಟಿದೆ. ಕ್ಷಣಮಾತ್ರದಲ್ಲಿ ಜೀವಮಾನ ಪರ್ಯಂತ ಮಾಡಿದ್ದ ಲಕ್ಷಾಂತರ ರೂಪಾಯಿ ಹಣ, ಆಭರಣ ಎಲ್ಲವೂ ಸುಟ್ಟು ಭಸ್ಮವಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದಾರೆ.