ಮಗಳ ಮೇಲೆ ನಿರಂತರವಾಗಿ ಕಾಮತೃಷೆ ತೀರಿಸಿಕೊಂಡ ಅಪ್ಪ ಅರೆಸ್ಟ್

ಬುಧವಾರ, 23 ಜೂನ್ 2021 (10:00 IST)
ಭೋಪಾಲ್: 19 ವರ್ಷದ ಮಗಳ ಮೇಲೆ ಕಳೆದ ಮೂರು ವರ್ಷಗಳಿಂದ ಸತತವಾಗಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.


ಭೋಪಾಲ್ ನಲ್ಲಿ ಈ ಘಟನೆ ನಡೆದಿದ್ದು, 19 ವರ್ಷದ ಸಂತ್ರಸ್ತ ಪುತ್ರಿ ಹಾಗೂ ಆಕೆಯ ತಾಯಿ ಆರೋಪಿ ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಮೂರು ವರ್ಷಗಳ ಹಿಂದೆ ಮೊದಲ ಬಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾನಭಂಗ ಮಾಡಿದಾಗ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದಳು. ಕೃತ್ಯವೆಸಗಿದ ಬಳಿಕ ಈ ವಿಚಾರ ಯಾರಿಗಾದರೂ ಬಾಯ್ಬಿಟ್ಟರೆ ಸಹೋದರ ಮತ್ತು ತಾಯಿಯನ್ನು ಮನೆಯಿಂದ ಹೊರಹಾಕುವುದಾಗಿ ಆರೋಪಿ ಬೆದರಿಕೆ ಹಾಕಿದ್ದ. ಆದರೆ ಈಗ ಆತನ ಕಿರುಕುಳ ಮಿತಿ ಮೀರಿದ ಹಿನ್ನಲೆಯಲ್ಲಿ ತಾಯಿಯ ಬಳಿ ಸಂತ್ರಸ್ತೆ ಕಷ್ಟ ಹೇಳಿಕೊಂಡಿದ್ದಳು. ಇದಾದ ಬಳಿಕ ಇಬ್ಬರೂ ಪೊಲೀಸರಿಗೆ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ