ಮಗ ತೀರಿಕೊಂಡನೆಂದು ಸೊಸೆಗೆ ಮಾವ ಈ ಶಿಕ್ಷೆ ಕೊಟ್ಟಿದ್ದು ಸರೀನಾ?!
ಮಗ-ಸೊಸೆ ಪ್ರೀತಿಸಿ ಮದುವೆಯಾಗಿದ್ದರು. ಕೆಲವು ತಿಂಗಳುಗಳಿಂದ ಪ್ರತ್ಯೇಕವಾಗಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಆದರೆ ಇಬ್ಬರ ನಡುವೆ ಆಗಾಗ ಕಲಹವಾಗುತ್ತಿತ್ತು. ಇದರಿಂದ ಮನನೊಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದ.
ಇದೇ ಬೇಸರದಲ್ಲಿ ಮಾವ ಸೊಸೆಗೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವವಾದ ಪರಿಣಾಮ ಸೊಸೆ ಮೃತಪಟ್ಟಿದ್ದಾಳೆ. ಘಟನೆ ಬಳಿಕ ಆರೋಪಿ ಮಾವ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.