ಹುಡುಗಿಯ ಹಿಂಬಾಲಿಸಿದ ಯುವಕನನ್ನು ಕಿಡ್ನ್ಯಾಪ್ ಮಾಡಿದ ತಂದೆ
12 ವರ್ಷದ ಬಾಲಕಿಯನ್ನು ಚುಡಾಯಿಸಿ ಯುವಕ ಕಿರುಕುಳ ನೀಡಿದ್ದ. ಈ ಬಗ್ಗೆ ಮನೆಯಲ್ಲಿ ಬಾಲಕಿ ತಂದೆಗೆ ದೂರು ಹೇಳಿದ್ದಳು. ಇದರಿಂದ ಸಿಟ್ಟಿಗೆದ್ದ ತಂದೆ ತನ್ನ ಮತ್ತೊಬ್ಬ ಗೆಳೆಯನ ಜೊತೆ ಸೇರಿಕೊಂಡು ಯುವಕನನ್ನು ಅಪಹರಿಸಿದ್ದಾರೆ.
ಬಳಿಕ ಅಜ್ಞಾತ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಇದೀಗ ಪೊಲೀಸರು ತಂದೆ ಮತ್ತು ಸ್ನೇಹಿತನ ಮೇಲೆ ಅಪಹರಣ, ಹಲ್ಲೆ ಪ್ರಕರಣ ದಾಖಲಿಸಿದರೆ, ಯುವಕನ ಮೇಲೆ ಚುಡಾಯಿಸಿ ಕಿರುಕುಳ ನೀಡಿದ ಆರೋಪದಲ್ಲಿ ಕೇಸ್ ಜಡಿದಿದ್ದಾರೆ.