ಮೊಬೈಲ್ ರಿಪೇರಿಗೆ ಕೊಟ್ಟು 2 ಲಕ್ಷ ರೂ. ಕಳೆದುಕೊಂಡ!
ಇತ್ತೀಚೆಗೆ ಮುಂಬೈ ವ್ಯಕ್ತಿಯೊಬ್ಬ ತನ್ನ ಫೋನ್ ರಿಪೇರಿಗೆಂದು ಕೊಟ್ಟು 2 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ. ಫೋನ್ ಸ್ಪೀಕರ್ ಸಮಸ್ಯೆಯಾಗಿತ್ತೆಂದು ವ್ಯಕ್ತಿ ಅಂಗಡಿಯೊಂದರಲ್ಲಿ ರಿಪೇರಿಗೆ ಕೊಟ್ಟಿದ್ದ.
ಆದರೆ ಆ ಅಂಗಡಿಯಾತ ಆತನ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡು 2 ಲಕ್ಷ ರೂ. ದೋಚಿದ್ದಾನೆ! ಇದೀಗ ಪೊಲೀಸರಿಗೆ ದೂರು ನೀಡಲಾಗಿದೆ.