ತಾಯಿ ಮೇಲಿನ ಸಿಟ್ಟಿಗೆ ಮಗಳ ಕೊಂದ ತಂದೆ
ಘಟನೆ ನಡೆದ ದಿನ ಆರೋಪಿ ತಡವಾಗಿ ಮನೆಗೆ ಬಂದಿದ್ದ. ಈ ಸಮಯದಲ್ಲಿ ಪತ್ನಿ ಮನೆಯಲ್ಲಿರಲಿಲ್ಲ. ಆಕೆ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು.
ಈ ವೇಳೆ ಪತ್ನಿಯ ಮೇಲೆ ಸಂಶಯಗೊಂಡ ಪತಿ ನಾನು ಮನೆಯಲ್ಲಿಲ್ಲದ ವೇಳೆ ಯಾರೆಲ್ಲಾ ಮನೆಗೆ ಬರುತ್ತಿದ್ದರು ಎಂದು ಮಗಳನ್ನು ಪ್ರಶ್ನೆ ಮಾಡಿದ್ದಾನೆ. ಸರಿಯಾಗಿ ಉತ್ತರ ಸಿಗದೇ ಇದ್ದಾಗ ಚಾಕುವಿನಿಂದ ಮಗಳಿಗೆ ಇರಿದಿದ್ದಾನೆ. ಇದರಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ. ಗದ್ದಲ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಬಂದು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಜೀವವುಳಿಯಲಿಲ್ಲ. ಆರೋಪಿ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ.