ಮಗಳು ಕಿಡ್ನ್ಯಾಪ್ ಎಂದು ತಂದೆ ಕಂಪ್ಲೇಂಟ್: ಆದ್ರೆ ಮಗಳು ಮಾಡಿದ್ದೇನು?

ಸೋಮವಾರ, 31 ಜನವರಿ 2022 (09:09 IST)
ಪಾಟ್ನಾ: ಒಂದೆಡೆ ತಂದೆ ಮಗಳು ಕಿಡ್ನ್ಯಾಪ್ ಆಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದರೆ, ಇತ್ತ ಮಗಳು ತಾನು ಮದುವೆಯಾಗಿರುವುದಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ! ಇಂತಹದ್ದೊಂದು ಘಟನೆ ಬಿಹಾರದಲ್ಲಿ ನಡೆದಿದೆ.

ಮಗಳು ಮದುವೆ ವಿಚಾರವನ್ನು ಫೇಸ್ ಬುಕ್ ನಲ್ಲಿ ಹಾಕಿರುವುದಲ್ಲದೆ, ತೊಂದರೆ ಕೊಡಬೇಡಿ ಎಂದು ಅಪ್ಪನಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ. ಅಲ್ಲದೆ, ರಕ್ಷಣೆ ಕೊಡುವಂತೆ ಪೊಲೀಸರಿಗೆ ಹೇಳಿದ್ದಾಳೆ.

ನಾನು ಸ್ವ ಇಚ್ಛೆಯಿಂದ ಮದುವೆಯಾಗಿದ್ದು, ಸಂತೋಷವಾಗಿದ್ದೇನೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ