ಮತಯಂತ್ರ ದೋಷ? ಸಹರಣ್‌ಪುರ್ ಅಭ್ಯರ್ಥಿಗೆ ಶೂನ್ಯ ಮತ, ನನ್ನ ಮತವೇ ಕಾಣೆ ಎಂದ ಅಭ್ಯರ್ಥಿ

ಶನಿವಾರ, 2 ಡಿಸೆಂಬರ್ 2017 (15:37 IST)
ಉತ್ತರಪ್ರದೇಶದ ಸಹರಣಪುರ್ ಜಿಲ್ಲೆಯಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹಿಳೆಯೊಬ್ಬರು ತಾನು ಹಾಕಿದ ಮತವೇ ಕಾಣೆಯಾಗಿದೆ.ಇದೊಂದು ವಂಚನೆಯಾಗಿದೆ ಎಂದು ದೂರಿದ್ದಾರೆ.
ಕನಿಷ್ಠ ನನ್ನ ಕುಟುಂಬದ ಸದಸ್ಯರು ನನ್ನ ಪರವಾಗಿ ಮತಹಾಕಿದ್ದಾರೆ. ನಾನು ಹೇಗೆ ಶೂನ್ಯ ಮತಗಳನ್ನು ಪಡೆಯಲು ಸಾಧ್ಯ ಎಂದು ಸ್ವತಂತ್ರ ಅಭ್ಯರ್ಥಿ ಶಬಾನಾ ಪ್ರಶ್ನಿಸಿದ್ದಾರೆ.
 
ನಮ್ಮ ಕುಟುಂಬದ ಪರವಾಗಿ ಮೂರು ಮತಗಳನ್ನು ಶಬಾನಾಗೆ ಹಾಕಿದ್ದೇವೆ. ಮೂರು ಮತಗಳು ಕಾಣೆಯಾಗಿವೆ. ನಮಗೆ ಕನಿಷ್ಠ 900 ಮತಗಳು ಬರಬೇಕಾಗಿತ್ತು. ಮತಯಂತ್ರಗಳನ್ನು ತಿರುಚಿರುವುದು ಈ ಘಟನೆಯಿಂದ ಸಾಬೀತಾಗಿದೆ ಎಂದು ಶಬಾನಾ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಉತ್ತರಪ್ರದೇಶದ ಪಶ್ಚಿಮ ಭಾಗದ ಜಿಲ್ಲೆಯಾಗಿರುವ ಸಹರಣಪುರದಲ್ಲಿ ಮೊದಲ ಬಾರಿಗೆ ಪಾಲಿಕೆ ಚುನಾವಣೆ ನಡೆದಿವೆ. ಸಾವಿರಾರು ಮತದಾರರ ಹೆಸರುಗಳು ಪಟ್ಟಿಯಲ್ಲಿ ಕಾಣೆಯಾಗಿವೆ ಎಂದು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಶಬಾನಾ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ