ಮತಯಂತ್ರಗಳಿಂದ ಬಿಜೆಪಿಗೆ ಗೆಲುವು: ತಾಕತ್ತಿದ್ರೆ ಬ್ಯಾಲೆಟ್ ಪೇಪರ್ ಬಳಸಿ ಗೆಲ್ಲಿ: ಬಿಜೆಪಿಗೆ ಸವಾಲ್

ಶನಿವಾರ, 2 ಡಿಸೆಂಬರ್ 2017 (14:44 IST)
ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಿ ಬಿಜೆಪಿ ಗೆಲುವು ಸಾಧಿಸುತ್ತಿದೆ. ತಾಕತ್ತಿದ್ರೆ ಬ್ಯಾಲೆಟ್ ಪೇಪರ್ ತಂದು ಚುನಾವಣೆ ಗೆಲ್ಲಿ ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಸವಾಲ್ ಹಾಕಿದ್ದಾರೆ.
ವಿಪಕ್ಷಗಳ ಸೋಲಿಗೆ ಮತಯಂತ್ರಗಳೇ ಕಾರಣವಾಗಿವೆ. ಮತಯಂತ್ರಗಳನ್ನು ತಿರುಚಲಾಗಿದೆ. ಪಾಲಿಕೆ ಚುನಾವಣೆಯಲ್ಲಿ ಮತದಾರರೊಬ್ಬರು ತಮಗೇ ತಾವೇ ಹಾಕಿದ ಮತ ಕೂಡಾ ಕಾಣೆಯಾಗಿದ್ದೂ ಶೂನ್ಯ ಮತಗಳು ಎಂದು ತೋರಿಸುತ್ತಿರುವುದು ಸಾಬೀತಾಗಿದೆ ಎಂದು ಕಿಡಿಕಾರಿದರು.
 
ಬಿಜೆಪಿಗೆ ತಾಕತ್ತಿದ್ರೆ ಮುಂಬರುವ ಲೋಕಸಭೆ ಚುನಾವಣೆ ಬ್ಯಾಲೆಟ್ ಪೇಪರ್ ಮೂಲಕ ನಡೆಸಲಿ. ಬ್ಯಾಲೆಟ್‌ ಪೇಪರ್‌ಗಳನ್ನು ಬಳಸಿದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ನನ್ನ ವಿಶ್ವಾಸವಾಗಿದೆ ಎಂದು ತಿಳಿಸಿದ್ದಾರೆ. 
 
ಪ್ರಧಾನಿ ಮೋದಿ ಸರಕಾರಕ್ಕೆ ಭಾರಿ ಜನ ಬೆಂಬಲವಿದ್ದಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲಿ. ಹಿಂಜರಿಯುತ್ತಿರುವುದು ಯಾಕೆ? ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವಂತೆ ವಿಪಕ್ಷಗಳು ಹೋರಾಟ ನಡೆಸಲಿವೆ ಎಂದು ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ