ಐಟಿ ರಿಟರ್ನ್ಸ್ ಗೆ ಇಂದೇ ಕಡೇ ದಿನ: ಗಡುವು ವಿಸ್ತರಣೆ ಇಲ್ಲ
ಸೋಮವಾರ, 31 ಜುಲೈ 2017 (07:10 IST)
2016-17ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್(ಐಟಿಆರ್) ಸಲ್ಲಿಸಲು ಇಂದೇ ಕಡೆಯ ದಿನವಾಗಿದ್ದು, ಈ ಗಡುವನ್ನು ವಿಸ್ತರಿಸುವ ಯಾವುದೇ ಯೋಚನೆ ನಮ್ಮ ಮುಂದೆ ಇಲ್ಲ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಿಟರ್ನ್ಸ್ ಫೈಲ್ ಮಾಡಲು ಜುಲೈ 31 ಅಂದರೆ ಇಂದೇ ಕೊನೆಯ ದಿನವಾಗಿದ್ದು, ಇದನ್ನು ವಿಸ್ತರಿಸುವ ಯೋಚನೆ ಇಲ್ಲ. ಇಲಾಖೆಗೆ ಈಗಾಗಲೇ 2 ಕೋಟಿ ಐಟಿ ರಿಟರ್ನ್ಸ್ ಫೈಲ್ ಮಾಡಲಾಗಿದೆ. ಉಳಿದವರು ನಿಗದಿತ ಅವಧಿಯಲ್ಲೇ ಫೈಲ್ ಮಾಡಬೇಕು ಎಂದು ಮನವಿ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ವೇತನದಾರರು ಮತ್ತು ಪಿಂಚಣಿದಾರರಿಗೆ ರಿರ್ಟನ್ಸ್ ಸಲ್ಲಿಕೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆ ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಜು.29ರಿಂದ 31ರವರೆಗೆ ಮೂರು ದಿನಗಳ ವಿಶೇಷ ಮೇಳ ಆಯೋಜಿಸಿದೆ. ರಿಟರ್ನ್ಸ್ ಸಲ್ಲಿಕೆಗಾಗಿ ಇಲ್ಲಿ 54 ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ.